Skip to main content
ವಿಡಿಯೋ
1/2
general

ಕಾರಾಗೃಹ ಡಿಜಿಪಿಯಾಗಿ ಅಲೋಕ್ ಕುಮಾರ್ ನೇಮಕ: ಭಾಸ್ಕರ್ ರಾವ್..!

By Sushmitha R
ಕಾರಾಗೃಹ ಡಿಜಿಪಿಯಾಗಿ ಅಲೋಕ್ ಕುಮಾರ್ ನೇಮಕ: ಭಾಸ್ಕರ್ ರಾವ್..!

ಅಲೋಕ್ ಕುಮಾರ್ ಅವರ ನೇಮಕದ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರು ಟ್ವಿಟರ್ ನಲ್ಲಿ ಮಹತ್ವದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯ ಮಹಾನಿರ್ದೇಶಕರು (ಡಿಜಿಪಿ) ಆಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ನೇಮಕಗೊಂಡಿರುವ ಕುರಿತು, ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹರ್ಷ ವ್ಯಕ್ತಪಡಿಸಿದ್ದು, ಈ ಇಬ್ಬರು ಅಧಿಕಾರಿಗಳ ನಡುವಿನ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

ಅಲೋಕ್ ಕುಮಾರ್ ಅವರ ನೇಮಕದ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರು ಟ್ವಿಟರ್ ನಲ್ಲಿ ಮಹತ್ವದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು, ಅಲೋಕ್ ಕುಮಾರ್ ಅವರಿಂದ ಮಾತ್ರವೇ ರಾಜ್ಯದ ಜೈಲು ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಸಾಧ್ಯ. ಪರಪ್ಪನ ಅಗ್ರಹಾರ ಸೇರಿದಂತೆ ಇಡೀ ಕಾರಾಗೃಹ ವ್ಯವಸ್ಥೆಯನ್ನು ಸಂಪೂರ್ಣವಾಗಿ 'ಕ್ಲೀನ್' ಮಾಡುವ ಸಾಮರ್ಥ್ಯ ಅವರಿಗೆ ಇದೆ. Women's Cotton Embroidered Long Anarkali Kurti with Pant and Dupatta

ಅಲೋಕ್ ಕುಮಾರ್ ಅವರ ಅವಧಿಯಲ್ಲೇ ಜೈಲುಗಳು ಕ್ಲೀನ್ ಆಗಬೇಕು. ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಜೈಲುಗಳ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾಸ್ಕರ್ ರಾವ್ ಅವರ ಈ ಮೆಚ್ಚುಗೆಯ ಪೋಸ್ಟ್‌ಗೆ, ಅಧಿಕಾರ ಸ್ವೀಕರಿಸಿದ ನಂತರ ಅಲೋಕ್ ಕುಮಾರ್ ಅವರು ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ. ಐ ವಿಲ್ ಟ್ರೈ ಮೈ ಲೆವೆಲ್ ಬೆಸ್ಟ್ ಎಂದು ಅವರು ಸರಳವಾಗಿ ಉತ್ತರ ನೀಡಿದ್ದಾರೆ. ಈ ಇಬ್ಬರು ಪ್ರಭಾವಿ ಅಧಿಕಾರಿಗಳ ನಡುವಿನ ಟ್ವಿಟರ್ ಚಾಟ್ ಸಾರ್ವಜನಿಕ ಗಮನ ಸೆಳೆದಿದೆ.ಇದನ್ನು ಓದಿ: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮುಂದುವರೆದ ರೋಡ್ ರೇಜ್: ಕ್ಯಾಂಟರ್ ಚಾಲಕನಿಗೆ ಆಟೋ ಚಾಲಕನಿಂದ ಅವಾಜ್..!

ಅಲೋಕ್ ಕುಮಾರ್ ಅವರ ನೇಮಕಾತಿ ಮತ್ತು ಈ ಕುರಿತ ಭಾಸ್ಕರ್ ರಾವ್ ಅವರ ಅಭಿಪ್ರಾಯಕ್ಕೆ ಸಾರ್ವಜನಿಕ ವಲಯದಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಠಿಣ ಆಡಳಿತ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ, ರಾಜ್ಯದ ಕಾರಾಗೃಹಗಳಲ್ಲಿನ ಅಕ್ರಮ ಚಟುವಟಿಕೆಗಳು, ಮಾದಕ ವಸ್ತುಗಳ ಸಾಗಣೆ ಮತ್ತು ವಿಐಪಿ ಸೌಲಭ್ಯಗಳಂತಹ ಸಮಸ್ಯೆಗಳು ನಿವಾರಣೆಯಾಗಲಿವೆ ಎಂಬ ಆಶಾಭಾವನೆಯನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ.

ಅಲೋಕ್ ಕುಮಾರ್ ಅವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ನಿರ್ವಹಿಸಿದ ಪ್ರಮುಖ ಜವಾಬ್ದಾರಿಗಳಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಅತ್ಯಂತ ಸವಾಲಿನ ಇಲಾಖೆಯ ಡಿಜಿಪಿಯಾಗಿರುವ ಅವರು, ಜೈಲುಗಳ ಸುಧಾರಣೆಗೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಇದನ್ನು ಓದಿ: ಬೆಂಗಳೂರು: ಉದ್ಯಮಿ ಮೇಲೆ ಏರ್ ಗನ್ ಫೈರಿಂಗ್, ತೀವ್ರ ಕುತೂಹಲ..!