Skip to main content
ವಿಡಿಯೋ
1/2
religion

ಈ ದೇವಸ್ಥಾನದಲ್ಲಿ ಶಿವನು ನಿಮಗೆ ತಲೆ ಕೆಳಗಾಗಿ ದರ್ಶನ ನೀಡುತ್ತಾನೆ..!

By Bhavana Gowda
ಈ ದೇವಸ್ಥಾನದಲ್ಲಿ ಶಿವನು ನಿಮಗೆ ತಲೆ ಕೆಳಗಾಗಿ ದರ್ಶನ ನೀಡುತ್ತಾನೆ..!

ಶಿವ ಆದಿ, ಅಂತ್ಯ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖವಾಗಿದೆ. ಶಿವನನ್ನ ಶಿವಲಿಂಗದ ರೂಪದಲ್ಲೂ ಪೂಜಿಸುತ್ತಾರೆ, ಕೇವಲ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಅನೇಕ ಕಡೆಗಳಲ್ಲೂ ಶಿವನ ದೇವಸ್ಥಾನಗಳಿವೆ.

ಶಿವನೇ ಆದಿ, ಅಂತ್ಯ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖವಾಗಿದೆ. ಶಿವನನ್ನ ಶಿವಲಿಂಗದ ರೂಪದಲ್ಲೂ ಪೂಜಿಸುತ್ತಾರೆ, ಕೇವಲ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಅನೇಕ ಕಡೆಗಳಲ್ಲೂ ಶಿವನ ದೇವಸ್ಥಾನಗಳಿವೆ. ಮೂರ್ತಿ ರೂಪದಲ್ಲಿ, ಲಿಂಗ ರೂಪದಲ್ಲಿ ಶಿವ ದರ್ಶನ ನೀಡುತ್ತಾನೆ ಆದರೆ ಶಿವ ತೆಲೆಕೆಳಗೆ ಮಾಡಿ ಕಾಣಿಸಿಕೊಳ್ಳುವ ದೇವಸ್ಥಾನವನ್ನ ನೀವು ನೋಡಿದ್ದಿರಾ? ಆಂಧ್ರಪ್ರದೇಶದ ಭೀಮಾವರಂ ಬಳಿಯಿರುವ ‘ಯಣಮದುರು ಶ್ರೀ ಪಾರ್ವತಿ ಅಂಬಿಕಾ ಸಮೇತ ಶಕ್ತೀಶ್ವರರ್ ದೇವಾಲಯ’ದಲ್ಲಿ ಶಿವ ತೆಲೆಕೆಳಗೆ ಮಾಡಿ ದರ್ಶನ ನೀಡುತ್ತಾನೆ. ಈ ದೈವಿಕ ಆಲಯದಲ್ಲಿ ಭಗವಂತ ತಲೆಕೆಳಗಾದ ರೀತಿಯಲ್ಲಿ ದರ್ಶನ ನೀಡುತ್ತಾರೆ, ಇದು ಜಗತ್ತಿನಲ್ಲಿರುವ ಅಪರೂಪದ ಶಿವನ ದೇವಸ್ಥಾನ.Symbol Premium Women's Desk-to-Dinner' Fit & Flare Wrap Dress (Midi Length | Stylish) (Available in Plus Sizes)

ಈ ವಿಶೇಷ ದೇಗುಲದ ದಂತಕಥೆಗಳು:

ಪುರಾಣಗಳ ಪ್ರಕಾರ, ಬ್ರಹ್ಮ ದೇವನಿಂದ ವರವನ್ನ ಪಡೆಯಲು ಸಾಂಭಾಸುರ ಎಂಬ ರಾಕ್ಷಸ ಬಹಳ ತಪಸ್ಸನ್ನ ಮಾಡಿ ಅನೇಕ ವರಗಳನ್ನ ಪಡೆದಿರುತ್ತಾನೆ. ಆ ವರದಿಂದ ರಾಕ್ಷಸ ಯಮ ಧರ್ಮರಾಯನನ್ನ ಹೊರತುಪಡಿಸಿ ಎಲ್ಲಾ ದೇವತೆ, ಋಷಿಗಳನ್ನ ಹಾಗೂ ಅಷ್ಟಾದಿ ಬಾಲಕರನ್ನ ಸೋಲಿಸುತ್ತಾನೆ.

ಆದರೆ ಯಮ ಧರ್ಮರಾಯನು ರಂಭಾಸುರನೊಂದಿಗೆ ಯುದ್ಧ ಮಾಡುತ್ತಿದ್ದಾಗ ತನ್ನ ಶಕ್ತಿಯನ್ನ ಕ್ರಮೆಣ ಕಳೆದುಕೊಳ್ಳುತ್ತಿದ್ದನು. ಕೊನೆಗೆ ರಾಕ್ಷಸ ತನ್ನ ಶಕ್ತಿಯಿಂದ ಯಮಪುರಿಯನ್ನ ವಶಪಡಿಸಿಕೊಂಡು, ದೇವರುಗಳನ್ನ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾನೆ. ಈ ಘಟನೆಯಿಂದ ಬೆಸತ್ತ ಯಮ ಧರ್ಮರಾಯ ಶಿವನ ಕುರಿತು ಘೋರವಾಗಿ ತಪಸ್ಸನ್ನ ಮಾಡುತ್ತಾನೆ.

ಯಮನ ಈ ಕಠಿಣವಾದ ತಪಸ್ಸಿನ್ನು ಮೆಚ್ಚಿ, ಪಾರ್ವತಿ ದೇವಿ ಪ್ರತ್ಯಕ್ಷಳಾಗುತ್ತಾಳೆ. ದೇವಿಯು ಯಮನಿಗೆ ರಾಕ್ಷಸನನ್ನು ನಾಶಮಾಡುವ ಶಕ್ತಿಯನ್ನು ನೀಡುತ್ತಾಳೆ. ಆ ಎಲ್ಲಾ ಶಕ್ತಿಗಳಿಂದ ಯಮನು ಸಾಂಭಾಸುರ ರಾಕ್ಷಸನನ್ನು ಕೊಂದು ದೇವರುಗಳನ್ನು ಮುಕ್ತಿಗೊಳಿಸಿದನು.

ನಂತರ ಯಮನು ಒಂದು ಪವಿತ್ರವಾದ ಸ್ಥಳಕ್ಕೆ ಬಂದು ಶಿವನನ್ನು ತಲೆಯ ಮೇಲೆ ಮತ್ತು ಪಾರ್ವತಿಯನ್ನು ಹಾಗೂ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿದನು. ಆದ್ದರಿಂದ, ಇಂದಿಗೂ, ಭಗವಂತನು ತಲೆಕೆಳಗಾಗಿ ಕಾಣಿಸಿಕೊಳ್ಳುತ್ತಾನೆ ಎಂದು ತಾಳ ಪುರಾಣದಿಂದ ತಿಳಿದು ಬರುತ್ತದೆ.ಇದನ್ನು ಓದಿ: ರಾಷ್ಟ್ರೀಯ ರೈತರ ದಿನ - ಪ್ರಕೃತಿಯ ಮಕ್ಕಳು - ದೇಶದ ಅನ್ನದಾತರಿಗೊಂದು ನಮನ

ಈ ವಿಶೇಷ ದೇವಸ್ಥಾನದ ಗರ್ಭಗುಡಿಯಲ್ಲಿ ಯಾವುದೇ ಶಿವಲಿಂಗವಿಲ್ಲ, ಬದಲಾಗಿ ಶಿವನು ತಲೆಕೆಳಗಾದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಶಿವನ ತೆಲೆ ಮೇಲೆ ನೆಲದ ಮೇಲೆ ಮತ್ತು ಪಾದಗಳನ್ನು ಮೇಲಕ್ಕೆತ್ತಿ ತಲೆಯ ವಿಶ್ರಾಂತಿ ಸ್ಥಾನದಲ್ಲಿ ದರ್ಶನ ನೀಡುತ್ತಾನೆ.

ಅಲ್ಲಿ ಪಾರ್ವತಿ ದೇವಿಯು ಮಾತೃತ್ವದ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ, ಸುಬ್ರಹ್ಮಣ್ಯ ಸ್ವಾಮಿಯು ಪಾರ್ವತಿಯ ತೊಡೆಯ ಮೇಲೆ ಕುಳಿತಿರುವ ಭಂಗಿಯಲ್ಲಿರುವ ವಿಗ್ರಹವಿದೆ. ಇಂತಹ ವಿಗ್ರಹವನ್ನು ನೀವು ಬೇರೆ ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಈ ದೇವಸ್ಥಾನವಿರುವ ಸ್ಥಳವು ಯಮನಿಂದ ಪೂಜಿಸಲ್ಪಟ್ಟ ಸ್ಥಳ ಎಂದು ಪರಿಗಣಿಸಲಾಗಿದೆ.

ಭಕ್ತರು ಇಲ್ಲಿ ಪೂಜಿಸುವುದರಿಂದ ಜಾತಕದಲ್ಲಿ ಅಕಾಲ ಮೃತ್ಯು ದೋಷವಿರುವವರು ಮತ್ತು ಜಾತಕದಲ್ಲಿ ಸಮಸ್ಯೆ ಇರುವವರು ಭಗವಂತ ಮತ್ತು ದೇವಿಯ ದರ್ಶನ ಮಾಡಿದರೆ, ಯಮನ ಭಯ ದೂರವಾಗುತ್ತದೆ ಎನ್ನಲಾಗುತ್ತದೆ. ಈ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಮಾಡುವ ಭಕ್ತರಿಗೆ ನವಗ್ರಹಗಳಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.ಇದನ್ನು ಓದಿ: ಆಸ್ಟ್ರೇಲಿಯಾದಲ್ಲಿ ಸೋಷಿಯಲ್‌ ಮೀಡಿಯಾ ಬ್ಯಾನ್‌: ಮಕ್ಕಳನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಡಬಹುದೇ?!