ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟ್ಯಾಕ್ಸಿ ಚಾಲಕರು ನಡೆಸಿದ ಸತತ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಹಳದಿ ಬೋರ್ಡ್ ಕ್ಯಾಬ್‌ಗಳಿಗೆ ವಿಧಿಸಲಾಗಿದ್ದ ಕಠಿಣ ಪಾರ್ಕಿಂಗ್ ಮತ್ತು ಪಿಕಪ್ ನಿಯಮಗಳನ್ನು ಸಡಿಲಗೊಳಿಸಿ ಹೊಸ ಆದೇಶ ಹೊರಡಿಸಿದೆ.
ಚಾಲಕರು ಎದುರಿಸುತ್ತಿದ್ದ ಪ್ರಮುಖ ಸಮಸ್ಯೆ ಎಂದರೆ ಅತ್ಯಂತ ಕಡಿಮೆ ಇದ್ದ ಪಿಕಪ್ ಸಮಯ. ಈ ಹಿಂದೆ ಕೇವಲ 8 ರಿಂದ 10 ನಿಮಿಷಗಳಿದ್ದ ಉಚಿತ ಪಿಕಪ್ ಸಮಯವನ್ನು ಇದೀಗ 15 ನಿಮಿಷಗಳಿಗೆ ಹೆಚ್ಚಿಸಲಾಗಿದೆ.
ಟರ್ಮಿನಲ್ 1ರ P3 ಮತ್ತು P4 ಪಾರ್ಕಿಂಗ್ ವಲಯಗಳಲ್ಲಿ ಈ ಹೊಸ ನಿಯಮ ಅನ್ವಯವಾಗಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಬಂದು ಕ್ಯಾಬ್ ಹತ್ತುವವರೆಗೆ ಆಗುವ ವಿಳಂಬವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.Naixa Women's Rayon Embroidered Straight Kurta with Pant and Dupatta Sets (Available in Plus Size) (NX-732)
ಹೆಚ್ಚುವರಿ ಸಮಯದ ದಂಡ: ಈ ಮೊದಲು 15 ನಿಮಿಷದ ಉಚಿತ ಸಮಯ ಮೀರಿದ ನಂತರ, 45 ನಿಮಿಷಗಳವರೆಗೆ ಉಳಿದುಕೊಂಡರೆ 100 ರೂ. ದಂಡ ವಿಧಿಸುವ ನಿಯಮವಿತ್ತು. ಈಗ ಅದನ್ನು ಪರಿಷ್ಕರಿಸಲಾಗಿದ್ದು, 45 ನಿಮಿಷ ಮೀರಿದ ನಂತರ ಪ್ರತಿ ಗಂಟೆಗೆ ವಿಧಿಸುತ್ತಿದ್ದ 100 ರೂ. ದಂಡವನ್ನು 50 ರೂ.ಗೆ ಇಳಿಸಲಾಗಿದೆ.
ದಿನದ ಪಾರ್ಕಿಂಗ್ ದರ: ಇಡೀ ದಿನ ವಾಹನವನ್ನು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದರೆ ಈ ಹಿಂದೆ 600 ರೂ. ದಂಡ ಪಾವತಿಸಬೇಕಿತ್ತು. ಹೊಸ ನಿಯಮದ ಪ್ರಕಾರ, ಈ ಮೊತ್ತವನ್ನು 350 ರೂ.ಗೆ ಇಳಿಕೆ ಮಾಡಲಾಗಿದೆ.ಇದನ್ನು ಓದಿ: Gen Z ಕ್ರೇಜ್: ಸೋಷಿಯಲ್ ಕನೆಕ್ಟಿವಿಟಿ ಎಂದರೆ ಲೈಕ್ಸ್, ಕಮೆಂಟ್ಸ್ ಅಷ್ಟೇನಾ!?
ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾಣದ ಟೋಲ್ ಬಳಿ ನೂರಾರು ಕ್ಯಾಬ್ ಚಾಲಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಕೇವಲ 8 ನಿಮಿಷದ ನಂತರ 150 ರೂ. ದಂಡ ವಿಧಿಸುವ ಹಳೆಯ ನಿಯಮವು ಅವೈಜ್ಞಾನಿಕವಾಗಿದೆ ಮತ್ತು ಇದು ಚಾಲಕರ ದೈನಂದಿನ ಆದಾಯದ ಮೇಲೆ ಹೊಡೆತ ಬೀಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಚಾಲಕರ ಸಂಘಟನೆಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ನಡುವೆ ನಡೆದ ಸಭೆಯ ಫಲವಾಗಿ ಈ ತಿದ್ದುಪಡಿ ತರಲಾಗಿದೆ. ಈ ಬದಲಾವಣೆಯು ಕೇವಲ ಚಾಲಕರಿಗಷ್ಟೇ ಅಲ್ಲದೆ, ಗಡಿಬಿಡಿಯಿಲ್ಲದೆ ವಾಹನ ಹತ್ತಲು ಪ್ರಯಾಣಿಕರಿಗೂ ಅನುಕೂಲವಾಗಲಿದೆ. ವಿಮಾನ ನಿಲ್ದಾಣದ ಆಡಳಿತ ಮಂಡಳಿಯ ಈ ಸ್ಪಂದನೆಯನ್ನು ಚಾಲಕರ ಒಕ್ಕೂಟಗಳು ಸ್ವಾಗತಿಸಿವೆ.ಇದನ್ನು ಓದಿ: ವಾಟ್ಸ್ಯಾಪ್ ಘೋಸ್ಟ್ ಪೇರಿಂಗ್ - ಸೈಬರ್ ಹಂತಕರ ಮಾಯಾಜಾಲದ ಬಗ್ಗೆ ಸರ್ಕಾರದ ಎಚ್ಚರಿಕೆ!