Skip to main content
ವಿಡಿಯೋ
1/3
general

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ ಮತ್ತು ಸವಾಲು: ಪೊಲೀಸರ ಹದ್ದಿನ ಕಣ್ಣು..!

By Sushmitha R
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ ಮತ್ತು ಸವಾಲು: ಪೊಲೀಸರ ಹದ್ದಿನ ಕಣ್ಣು..!

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಅದು ಇಡೀ ದೇಶದ ಗಮನ ಸೆಳೆಯುವಂತಹ ಅದ್ದೂರಿ ಘಟನೆ.

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಅದು ಇಡೀ ದೇಶದ ಗಮನ ಸೆಳೆಯುವಂತಹ ಅದ್ದೂರಿ ಘಟನೆ. ಆದರೆ, ಈ ಬಾರಿಯ ಸಂಭ್ರಮಕ್ಕೆ ಪೊಲೀಸರು ಮತ್ತು ಆಡಳಿತ ಮಂಡಳಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲು ಸಿದ್ಧತೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗುತ್ತಿವೆ. ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಈ ವರ್ಷ ಕೂಡ , 2025 ನೇ ವರ್ಷಕ್ಕೆ ಬಾಯ್‌ ಬಾಯ್‌ ಹೇಳಿ 2026 ನೇ ವರ್ಷಕ್ಕೆ ಹಾಯ್‌ ಹೇಳ್ತಾ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಲು ಯುವಕ, ಯುವತಿಯರು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿವರ್ಷದಂತೆ ಈ ಬಾರಿಯೂ ಲಕ್ಷಾಂತರ ಜನರು ಈ ಪ್ರದೇಶಗಳಿಗೆ ಹರಿದುಬರುವ ನಿರೀಕ್ಷೆಯಿದೆ. ಆದರೆ, ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಹಾಗೂ ಜಿಬಿಎ (GBA) ಅಧಿಕಾರಿಗಳು ಈಗಿನಿಂದಲೇ ಸರಣಿ ಸಭೆಗಳನ್ನು ನಡೆಸಿ ಕಠಿಣ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದಾರೆ.HELLA FASHIONS Women’s Chiffon Dupatta 2.4 Meter | All Over Gold Print with Elegant Zari Lace Edges | Lightweight, Stylish Dupatta for Ethnic Suits, Lehengas

ಕಳೆದ ವರ್ಷದ ಸಂಭ್ರಮದ ಮರುನೋಟ:

ಕಳೆದ ವರ್ಷ ಬೆಂಗಳೂರಿನ ರಸ್ತೆಗಳು ಜನಸಾಗರದಿಂದ ತುಂಬಿಹೋಗಿದ್ದವು. ರಾತ್ರಿ 10 ಗಂಟೆಯ ನಂತರವಂತೂ ಎಂ.ಜಿ ರಸ್ತೆಯತ್ತ ಬರುವ ಜನರ ಸಂಖ್ಯೆ ನಿಯಂತ್ರಣ ಮೀರಿತ್ತು. ಪಬ್‌ಗಳು ಮತ್ತು ಕ್ಲಬ್‌ಗಳಲ್ಲಿ ಸಂಗೀತದ ಅಬ್ಬರಕ್ಕೆ ಯುವಜನತೆ ಹೆಜ್ಜೆ ಹಾಕಿದ್ದರು.

ಝಗಮಗಿಸುವ ದೀಪಾಲಂಕಾರಗಳು ನಗರಕ್ಕೆ ವಿಶೇಷ ಕಳೆಯನ್ನು ನೀಡಿದ್ದವು. ಮೆಟ್ರೋ ರೈಲುಗಳು ಪ್ರತಿ 4 ನಿಮಿಷಕ್ಕೊಂದು ಸಂಚರಿಸಿದರೂ ಜನದಟ್ಟಣೆಯನ್ನು ನಿಭಾಯಿಸುವುದು ಕಷ್ಟವಾಗಿತ್ತು. ಅಂತಿಮವಾಗಿ ರಾತ್ರಿ 11 ಗಂಟೆಗೆ ಎಂ.ಜಿ ರಸ್ತೆ ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆಯನ್ನು ಸ್ಥಗಿತಗೊಳಿಸಿ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ಮೂಲಕ ಜನರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೋಗಿಲು ಲೇಔಟ್ ಸಂತ್ರಸ್ತರಿಗೆ 'ಕನಕಪುರ ಬಂಡೆ'ಯ ಆಸರೆ: ಪುನರ್ ವಸತಿ ಭಾಗ್ಯ ಸಿಗುತ್ತಾ..?

ಬಿಗಿ ಭದ್ರತೆ ಮತ್ತು ನಿಯಂತ್ರಣ ಕ್ರಮಗಳು:

ಹೊಸ ವರ್ಷದ ಕಿಕ್ಕಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸರ್ಕಾರ ಈ ಬಾರಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸಾರ್ವಜನಿಕ ಆಚರಣೆಗೆ ನಿರ್ಬಂಧ ಹೇರುವ ಬಗ್ಗೆ ಚಿಂತನೆ ನಡೆಸುತ್ತಿದೆ. ಎಂ.ಜಿ ರಸ್ತೆ, ಇಂದಿರಾನಗರ, ಕೋರಮಂಗಲದಂತಹ ಅತಿ ಹೆಚ್ಚು ಜನಸಂದಣಿ ಸೇರುವ ಜಾಗಗಳಲ್ಲಿ ಪೊಲೀಸರು ಈಗಾಗಲೇ ಹೋಟೆಲ್ ಮತ್ತು ಪಬ್ ಮಾಲೀಕರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಈ ಬಾರಿ ಮಹಿಳೆಯರ ಸುರಕ್ಷತೆಗಾಗಿ ವಿಶೇಷ 'ಮಹಿಳಾ ಸುರಕ್ಷಾ ಕೇಂದ್ರ'ಗಳನ್ನು ಸ್ಥಾಪಿಸಲಾಗುತ್ತಿದ್ದು, ಅಲ್ಲಿ ವೈದ್ಯಕೀಯ ನೆರವು ಲಭ್ಯವಿರಲಿದೆ.

ಮಹಿಳೆಯರ ಸುರಕ್ಷತೆಯೇ ಈ ಬಾರಿಯ ಭದ್ರತಾ ಯೋಜನೆಯ ಮುಖ್ಯ ಗುರಿಯಾಗಿದೆ. ಎಂ.ಜಿ. ರಸ್ತೆ ಮತ್ತು ಮೆಜೆಸ್ಟಿಕ್ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ವಿಶೇಷ 'ಮಹಿಳಾ ಸುರಕ್ಷಾ ಕೇಂದ್ರ' ಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಮಹಿಳಾ ಪೊಲೀಸರು ಇರಲಿದ್ದಾರೆ. ಮದ್ಯ ಸೇವಿಸಿ ಅಸ್ವಸ್ಥರಾದ ಅಥವಾ ಸಂಕಷ್ಟದಲ್ಲಿರುವ ಯುವತಿಯರಿಗೆ ಇಲ್ಲಿ ತಕ್ಷಣದ ವೈದ್ಯಕೀಯ ನೆರವು ಮತ್ತು ಸುರಕ್ಷತೆ ನೀಡಲಾಗುವುದು. ಕುವೆಂಪು ಜನ್ಮ ದಿನ - ವಿಶ್ವ ಮಾನವ ದಿನ - ಚೇತನದಿಂದ ಅನಿಕೇತನದವರೆಗಿನ ದರ್ಶನ

ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಹೈ ಅಲರ್ಟ್ ಆಗಿರಲಿದ್ದಾರೆ. ಪಾನಮತ್ತ ಚಾಲಕರನ್ನು ಪತ್ತೆ ಹಚ್ಚಲು ನಗರದಾದ್ಯಂತ ವಿಶೇಷ ನಾಕಾಬಂಧಿಗಳನ್ನು ಹಾಕಲಾಗುತ್ತಿದ್ದು, ಮಧ್ಯರಾತ್ರಿಯ ನಂತರದ ವಾಹನ ಸಂಚಾರದ ಮೇಲೆ ತೀವ್ರ ನಿಗಾ ಇರಿಸಲಾಗುವುದು. ಒಟ್ಟಾರೆಯಾಗಿ, ಜನಸಾಮಾನ್ಯರ ಸಂಭ್ರಮಕ್ಕೆ ಯಾವುದೇ ಭಂಗ ಬಾರದಂತೆ, ಆದರೆ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಲು ಸರ್ಕಾರ ಸರ್ವಸನ್ನದ್ಧವಾಗಿದೆ.

ಅಹಿತಕರ ಘಟನೆಗಳು ಮತ್ತು ಪೊಲೀಸ್ ಕಾರ್ಯಾಚರಣೆ:

ಸಂಭ್ರಮದ ನಡುವೆಯೂ ಕೆಲವು ಕಡೆ ಕಹಿ ಘಟನೆಗಳು ವರದಿಯಾಗಿದ್ದವು. ಬ್ರಿಗೇಡ್ ರಸ್ತೆಯಲ್ಲಿ ಯುವತಿಯನ್ನು ಚುಡಾಯಿಸಿದ ಯುವಕನ ಮೇಲೆ ಹಲ್ಲೆ ನಡೆದರೆ, ಎಲೆಕ್ಟ್ರಾನಿಕ್ ಸಿಟಿ ಮೇಲೇತುವೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಗುಂಪೊಂದು ಯುವಕನ ಮೇಲೆ ದಾಳಿ ನಡೆಸಿತ್ತು. ಇಂತಹ ಘಟನೆಗಳನ್ನು ತಡೆಯಲು ಈ ಬಾರಿ ಬೃಹತ್ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.ಇದನ್ನು ಓದಿ: ಕೋಗಿಲು ಲೇಔಟ್ ಸಂತ್ರಸ್ತರಿಗೆ 'ಕನಕಪುರ ಬಂಡೆ'ಯ ಆಸರೆ: ಪುನರ್ ವಸತಿ ಭಾಗ್ಯ ಸಿಗುತ್ತಾ..?

ಪೊಲೀಸ್ ಬಲ: 15 ಡಿಸಿಪಿಗಳು, ೪೫ ಎಸಿಪಿಗಳು, 160 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಸುಮಾರು 8000 ಕ್ಕೂ ಹೆಚ್ಚು ಸಿಬ್ಬಂದಿ ಭದ್ರತೆಗೆ ಲಭ್ಯವಿರಲಿದ್ದಾರೆ.

ತಪಾಸಣೆ: ಪಾನಮತ್ತ ಚಾಲಕರನ್ನು ಪತ್ತೆಹಚ್ಚಲು 48 ವಿಶೇಷ ತಂಡಗಳನ್ನು ರಚಿಸಲಾಗಿದೆ.

ನಿರ್ಬಂಧ: ರಾತ್ರಿ 11 ಗಂಟೆಯ ನಂತರ ನಗರದ ಪ್ರಮುಖ ಮೇಲೇತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು.

ಕೇವಲ ಎಂ.ಜಿ ರಸ್ತೆ ಮಾತ್ರವಲ್ಲದೆ, ರಾಜರಾಜೇಶ್ವರಿ ನಗರ, ಜಯನಗರ, ಮಲ್ಲೇಶ್ವರಂ ಮತ್ತು ಎಚ್‌ಎಸ್‌ಆರ್ ಲೇಔಟ್‌ಗಳಂತಹ ವಸತಿ ಪ್ರದೇಶಗಳಲ್ಲೂ ಅಪಾರ್ಟ್‌ಮೆಂಟ್ ನಿವಾಸಿಗಳು ತಮ್ಮದೇ ಆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದಾರೆ. ಇನ್ನು ಕೆಲವರು ನಗರದ ಗದ್ದಲದಿಂದ ದೂರವಿರಲು ಮಡಿಕೇರಿ, ಚಿಕ್ಕಮಗಳೂರು ಮತ್ತು ಉಡುಪಿಯಂತಹ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ.ಇದನ್ನು ಓದಿ: ಅರಾವಳಿ ಪರ್ವತಶ್ರೇಣಿ ಸಂರಕ್ಷಣೆ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ!