Skip to main content
ವಿಡಿಯೋ
1/2
general

ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ 21 ಹೊಸ ಆಧುನಿಕ ರೈಲುಗಳ ಸೇರ್ಪಡೆ..!

By Sushmitha R
ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ 21 ಹೊಸ ಆಧುನಿಕ ರೈಲುಗಳ ಸೇರ್ಪಡೆ..!

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದಿದ್ದು, ಹಸಿರು ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಕ್ರಮ ಕೈಗೊಂಡಿದೆ.

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದಿದ್ದು, ಹಸಿರು ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಕ್ರಮ ಕೈಗೊಂಡಿದೆ. ಹಸಿರು ಮಾರ್ಗಕ್ಕೆ ಸಂಪೂರ್ಣವಾಗಿ 21 ಹೊಸ ಆಧುನಿಕ 6-ಕೋಚ್ CRRC ರೈಲುಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.

ಹಸಿರು ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದ್ದ ಹಳೆಯ 17 ರೈಲುಗಳನ್ನು ಹಂತ ಹಂತವಾಗಿ ನೇರಳೆ ಮಾರ್ಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ನೇರಳೆ ಮಾರ್ಗವು ಹೆಚ್ಚು ಪ್ರಯಾಣಿಕರ ದಟ್ಟಣೆಯನ್ನು ಹೊಂದಿರುವುದರಿಂದ, ಅಲ್ಲಿ ಹೆಚ್ಚುವರಿ ರೈಲುಗಳ ಅವಶ್ಯಕತೆ ಇದೆ. Plain and Solid High Slit Cotton Regular Stright Casual Kurti for Women with Mandarin Collar and Front Side Show Button

ಈ ಬದಲಾವಣೆಯಿಂದ ಎರಡೂ ಮಾರ್ಗಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಂಚಾರ ಅವಧಿ ಕಡಿತ ಹೊಸ ರೈಲುಗಳ ಸೇರ್ಪಡೆಯಿಂದ ಹಸಿರು ಮಾರ್ಗದಲ್ಲಿ ರೈಲುಗಳ ಓಡಾಟದ ಆವರ್ತನ ಹೆಚ್ಚಾಗಲಿದ್ದು, ಪ್ರಯಾಣದ ಅವಧಿ ಗಣನೀಯವಾಗಿ ಕಡಿತಗೊಳ್ಳಲಿದೆ.

ಆಧುನಿಕ ತಂತ್ರಜ್ಞಾನ, ಚೀನಾದ ಸಿಆರ್‌ಆರ್‌ಸಿ (CRRC) ಮತ್ತು ಭಾರತದ ಟಿಟಾಗಢ್ ರೈಲ್ ಸಿಸ್ಟಮ್ಸ್ ಸಹಯೋಗದಲ್ಲಿ ಈ ರೈಲುಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಸುಧಾರಿತ ಡಿಟಿಜಿ ತಂತ್ರಜ್ಞಾನವನ್ನು ಬಳಸಲಾಗಿದೆ. ಇದನ್ನು ಓದಿ: ʻBandar Apna Dostʼ - ಅತಿಹೆಚ್ಚು ವೀಕ್ಷಣೆ ಪಡೆಯುತ್ತಿರುವ ಎಐ ಬಳಸಿದ ಯೂಟ್ಯೂಬ್‌ ಚಾನೆಲ್‌ - ವರ್ಷಕ್ಕೆ ₹35 ಕೋಟಿ ಗಳಿಕೆ!

33.5 ಕಿ.ಮೀ ಉದ್ದದ ಹಸಿರು ಮಾರ್ಗಕ್ಕೆ ಸಂಪೂರ್ಣ ಹೊಸ ರೈಲುಗಳು ಲಭ್ಯವಾಗುವುದರಿಂದ, ಗರಿಷ್ಠ ದಟ್ಟಣೆಯ ಸಮಯದಲ್ಲಿ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾಯುವ ಸಮಯ ಕಡಿಮೆಯಾಗಲಿದೆ. ಅಲ್ಲದೆ, ನೇರಳೆ ಮಾರ್ಗಕ್ಕೆ ಹಳೆಯ ರೈಲುಗಳ ಸೇರ್ಪಡೆಯಿಂದ ಅಲ್ಲಿನ ದಟ್ಟಣೆ ನಿರ್ವಹಣೆಗೂ ಅನುಕೂಲವಾಗಲಿದೆ.ಇದನ್ನು ಓದಿ: ಮೆಟಾ - ಎಐ ಉನ್ನತೀಕರಣಕ್ಕಾಗಿ ಚೀನಾದ Manus ಖರೀದಿ