ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮತ್ತು ನಿರ್ಣಾಯಕ ಎನ್ನಲಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮುಂಬರುವ ಜನವರಿ 15, 2026 ರಂದು ರಾಜ್ಯದ ಒಟ್ಟು 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ (ಮಹಾನಗರ ಪಾಲಿಕೆಗಳು) ಮತದಾನ ನಡೆಯಲಿದೆ.
ರಾಜ್ಯಾದ್ಯಂತ ಸುಮಾರು 3.49 ಕೋಟಿ ಮತದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪಾಲಿಕೆ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಮುಂಬೈ (BMC), ಪುಣೆ, ನಾಗ್ಪುರ ಮತ್ತು ಥಾಣೆಯಂತಹ ಪ್ರಮುಖ ನಗರಗಳು ಸೇರಿದಂತೆ 29 ಕಾರ್ಪೊರೇಷನ್‌ಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುತ್ತಿರುವುದು. La Trove Velvet Jewelry Tray Organizer, Drawer Display for Earrings, Chains, Necklaces, and Jewelry, Velvet Necklace Tray for Home, Closet, and Jewelry Storage - Necklace | Pink |
ಈ ಚುನಾವಣೆ ಕೇವಲ ಸ್ಥಳೀಯ ಅಭಿವೃದ್ಧಿಯ ವಿಷಯವಲ್ಲ. ಇದು ಮಹಾಯುತಿ ಬಿಜೆಪಿ, ಶಿವಸೇನೆ-ಶಿಂಧೆ ಬಣ, ಎನ್‌ಸಿಪಿ-ಅಜಿತ್ ಪವಾರ್ ಬಣ ಮತ್ತು ಮಹಾ ವಿಕಾಸ್ ಅಘಾಡಿ ಶಿವಸೇನೆ-ಯುಬಿಟಿ, ಕಾಂಗ್ರೆಸ್, ಎನ್‌ಸಿಪಿ-ಶರದ್ ಪವಾರ್ ಬಣ ನಡುವಿನ ನೇರ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.
ವಿಶೇಷವಾಗಿ ಏಷ್ಯಾದ ಅತಿದೊಡ್ಡ ಪಾಲಿಕೆಯಾದ ಮುಂಬೈ ಮಹಾನಗರ ಪಾಲಿಕೆ (BMC) ಮೇಲೆ ಹಿಡಿತ ಸಾಧಿಸಲು ಎಲ್ಲಾ ಪಕ್ಷಗಳು ರಣತಂತ್ರ ರೂಪಿಸಿವೆ. ಜನವರಿ 15 ರಂದು ಸುಗಮ ಮತದಾನಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆ ನಡೆಸಿದೆ.ಇದನ್ನು ಓದಿ: ಸ್ಲೀಪರ್ ಬಸ್‌ಗಳ ಅಗ್ನಿ ದುರಂತಕ್ಕೆ ಬ್ರೇಕ್: ಕೇಂದ್ರದಿಂದ ಕಠಿಣ ನಿಯಮ ಜಾರಿ
ಕೋಟ್ಯಂತರ ಮತದಾರರಿಗಾಗಿ ಲಕ್ಷಾಂತರ ಚುನಾವಣಾ ಸಿಬ್ಬಂದಿ ಮತ್ತು ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ನಡೆಯುತ್ತಿರುವ ಈ ಪಾಲಿಕೆ ಚುನಾವಣೆಗಳು ರಾಜ್ಯದ ಜನಾದೇಶ ಯಾವ ಕಡೆಗೆ ವಾಲಿದೆ ಎಂಬುದನ್ನು ಸಾಬೀತುಪಡಿಸಲಿವೆ.
ನಗರ ಪ್ರದೇಶದ ರಸ್ತೆಗಳು, ಮೂಲಸೌಕರ್ಯ, ಕುಡಿಯುವ ನೀರು ಮತ್ತು ನೈರ್ಮಲ್ಯದಂತಹ ವಿಷಯಗಳ ಜೊತೆಗೆ ಪಕ್ಷಗಳ ಸಿದ್ಧಾಂತ ಮತ್ತು ನಾಯಕತ್ವಕ್ಕೂ ಇದು ದೊಡ್ಡ ಪರೀಕ್ಷೆಯಾಗಿದೆ. ಇದನ್ನು ಓದಿ: ಮತದಾರರನ್ನು ಸೆಳೆಯಲು ' ಅಸ್ತ್ರ': ಬಿಜೆಪಿ ತಂತ್ರಕ್ಕೆ ಪಿಣರಾಯಿ ವಿಜಯನ್ ಪ್ರತಿ ತಂತ್ರ..!
ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆಯ ದಿನಾಂಕದ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ರಾಜ್ಯದ ರಾಜಧಾನಿ ಮುಂಬೈ ಸೇರಿದಂತೆ 29 ನಗರಗಳ ಭವಿಷ್ಯ ಜನವರಿ 15 ರಂದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ.ಇದನ್ನು ಓದಿ: ರಾಜ್ಯ ನಾಯಕತ್ವದಿಂದ ರಾಷ್ಟ್ರ ರಾಜಕಾರಣದವರೆಗೆ - ಪ್ರಹ್ಲಾದ್ ಜೋಶಿ