Skip to main content
ವಿಡಿಯೋ
1/2
politics

ಮೈಸೂರು ಬಿಜೆಪಿಯಲ್ಲಿ ಟಿಕೆಟ್ ಫೈಟ್: ಪ್ರತಾಪ್ ಸಿಂಹ..!

By Sushmitha R
ಮೈಸೂರು ಬಿಜೆಪಿಯಲ್ಲಿ ಟಿಕೆಟ್ ಫೈಟ್: ಪ್ರತಾಪ್ ಸಿಂಹ..!

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇದೀಗ ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಅಡಿಯಿಡುವ ಸುಳಿವು ನೀಡಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇದೀಗ ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಅಡಿಯಿಡುವ ಸುಳಿವು ನೀಡಿದ್ದಾರೆ.

ಕಳೆದ ಕೆಲವು ಸಮಯದಿಂದ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ತೋರುತ್ತಿದ್ದ ಪ್ರತಾಪ್ ಸಿಂಹ, ಇದೀಗ ನೇರವಾಗಿಯೇ ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ನಾನು ಅಭ್ಯರ್ಥಿಯಲ್ಲ, ಕೇವಲ ಟಿಕೆಟ್ ಆಕಾಂಕ್ಷಿ ಅಷ್ಟೇ. ಅಭ್ಯರ್ಥಿ ಮತ್ತು ಆಕಾಂಕ್ಷಿ ನಡುವಿನ ವ್ಯತ್ಯಾಸ ಅರಿಯದವರು ಟೀಕೆ ಮಾಡುತ್ತಿದ್ದಾರೆ.

ಅಂತಿಮವಾಗಿ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ, ಎಂದು ಸ್ಪಷ್ಟಪಡಿಸುವ ಮೂಲಕ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಚಾಮರಾಜ ಕ್ಷೇತ್ರದ ಇತಿಹಾಸವನ್ನು ಸ್ಮರಿಸಿದ ಅವರು, ಈ ಹಿಂದೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಚ್.ಎಸ್. ಶಂಕರಲಿಂಗೇಗೌಡರು ಮತ್ತು ವಾಸು ಅವರಂತಹ ಗಣ್ಯರ ಹಾದಿಯಲ್ಲಿ ಸಾಗಲು ತಾವು ಬಯಸುವುದಾಗಿ ತಿಳಿಸಿದ್ದಾರೆ. Clara 925 Sterling Silver Flower Bracelet | Adjustable, Platinum Plated, Swiss Zirconia | Gift for Women and Girls

ಚಾಮರಾಜ ಕ್ಷೇತ್ರದ ಮತದಾರರು ವಿದ್ಯಾವಂತರು ಮತ್ತು ಪ್ರಬುದ್ಧರಾಗಿದ್ದಾರೆ. ಅವರು ಸದಾ ಒಬ್ಬ ಸಮರ್ಥ ಮತ್ತು ವಿದ್ಯಾವಂತ ಪ್ರತಿನಿಧಿಯನ್ನು ಬಯಸುತ್ತಾರೆ, ಎಂದು ಹೇಳುವ ಮೂಲಕ ತಮ್ಮ ಶೈಕ್ಷಣಿಕ ಹಿನ್ನೆಲೆ ಹಾಗೂ ಸಂಸದರಾಗಿ ಮಾಡಿದ ಕೆಲಸಗಳನ್ನು ಜನರ ಮುಂದೆ ಇಡಲು ಸಜ್ಜಾಗಿದ್ದಾರೆ.ಇದನ್ನು ಓದಿ: ಅಬುದಾಬಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ - ಸುಸ್ಥಿರ ಇಂಧನ - ಭವಿಷ್ಯಕ್ಕಾಗಿ ಜಾಗತಿಕ ಸಹಕಾರ ಅಗತ್ಯ

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ನಂತರ ಪ್ರತಾಪ್ ಸಿಂಹ ಅವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಲು ನಿರ್ಧರಿಸಿದ್ದಾರೆ. ಚಾಮರಾಜ ಕ್ಷೇತ್ರವು ಮೈಸೂರು ನಗರದ ಪ್ರಮುಖ ಭಾಗವಾಗಿದ್ದು, ಇಲ್ಲಿ ಬಿಜೆಪಿ ಗಟ್ಟಿಯಾದ ನೆಲೆಯನ್ನು ಹೊಂದಿದೆ. ಹೀಗಾಗಿ ಇಲ್ಲಿಂದ ಸ್ಪರ್ಧಿಸುವುದು ಅವರ ರಾಜಕೀಯ ಮರುಜನ್ಮಕ್ಕೆ ದಾರಿಯಾಗಬಹುದು ಎಂಬ ಲೆಕ್ಕಾಚಾರವಿದೆ.ಇದನ್ನು ಓದಿ: ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದರೆ ಸಿದ್ದು-ಡಿಕೆಶಿ ಪ್ಲಾನ್ ಉಲ್ಟಾ: ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ..!