Skip to main content
ವಿಡಿಯೋ
1/2
metro

ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ಗಿಫ್ಟ್: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದಿನವಿಡೀ ಸುತ್ತಾಡಿ..!

By Sushmitha R
ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ಗಿಫ್ಟ್: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದಿನವಿಡೀ ಸುತ್ತಾಡಿ..!

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ' (BMRCL) ಸಿಹಿ ಸುದ್ದಿಯೊಂದನ್ನು ನೀಡಿದೆ.

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ' (BMRCL) ಸಿಹಿ ಸುದ್ದಿಯೊಂದನ್ನು ನೀಡಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ ಕ್ಯೂಆರ್ (QR) ಕೋಡ್ ಆಧಾರಿತ ಹೊಸ ಸರಣಿಯ ಪ್ರವಾಸಿ ಪಾಸ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಇದುವರೆಗೆ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣದ ಪಾಸ್‌ಗಳು ಕೇವಲ 'ಸ್ಮಾರ್ಟ್ ಕಾರ್ಡ್‌'ಗಳ ಮೂಲಕ ಮಾತ್ರ ಲಭ್ಯವಿತ್ತು. ಆದರೆ ಈಗ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಬಿಎಂಆರ್‌ಸಿಎಲ್ ಮೊಬೈಲ್ ಮೂಲಕ ಬಳಸಬಹುದಾದ QR ಪಾಸ್‌ಗಳನ್ನು ಪರಿಚಯಿಸಿದೆ. ಇದರಿಂದ ಪ್ರಯಾಣಿಕರು ಭೌತಿಕ ಕಾರ್ಡ್‌ಗಳನ್ನು ಹೊಂದಿರಬೇಕಾದ ಅಗತ್ಯವಿಲ್ಲ.TecoKart® 7-Pair Safe Resin-Crystal Earrings for Girls Stylish | Comfortable Soft Clip On Earrings for Non Pierced Ears Pain-Free | Cute Princess-Themed Kids Earrings for Girls Ideal for Parties

ಈ ಹಿಂದೆ ಸ್ಮಾರ್ಟ್ ಕಾರ್ಡ್ ಆಧಾರಿತ ಪಾಸ್ ಪಡೆಯಲು 50 ರೂಪಾಯಿ ಭದ್ರತಾ ಠೇವಣಿ ಪಾವತಿಸಬೇಕಿತ್ತು. ಆದರೆ ಹೊಸ QR ಆಧಾರಿತ ಪಾಸ್‌ಗಳಿಗೆ ಯಾವುದೇ ಭದ್ರತಾ ಠೇವಣಿ ನೀಡುವ ಅಗತ್ಯವಿಲ್ಲ. ಇದು ಪ್ರಯಾಣಿಕರಿಗೆ ಆರ್ಥಿಕವಾಗಿ ಲಾಭದಾಯಕವಾಗಿದೆ. ಜನವರಿ 19 ರೊಳಗೆ ಮತದಾರರ ಕರಡು ಪಟ್ಟಿ ಸಿದ್ದ - ಪಾಲಿಕೆ ಚುನಾವಣೆಗೆ ಹೆಚ್ಚಿದ ನಿರೀಕ್ಷೆ!?

ಬೆಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ದಿನವಿಡೀ ಹೆಚ್ಚು ಬಾರಿ ಮೆಟ್ರೋ ಬಳಸುವ ಜನರಿಗೆ ಈ ಪಾಸ್‌ಗಳು ವರದಾನವಾಗಲಿವೆ. ಪ್ರತಿ ಬಾರಿ ಟಿಕೆಟ್ ಪಡೆಯಲು ಸರದಿಯಲ್ಲಿ ನಿಲ್ಲುವ ಅವಶ್ಯಕತೆ ಇಲ್ಲದೆ, ಮೊಬೈಲ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸುಲಭವಾಗಿ ಪ್ರಯಾಣಿಸಬಹುದು. ಇದು ಮೆಟ್ರೋ ನಿಲ್ದಾಣಗಳಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.ಇದನ್ನು ಓದಿ: ಮೈಸೂರು ಬಿಜೆಪಿಯಲ್ಲಿ ಟಿಕೆಟ್ ಫೈಟ್: ಪ್ರತಾಪ್ ಸಿಂಹ..!