Skip to main content
ವಿಡಿಯೋ
1/2
politics

ರಾಹುಲ್ ಗಾಂಧಿಗೆ ಸದನದಲ್ಲಿ ಬ್ರೇಕ್: ಪ್ರಕಟವಾಗದ ನರವಾಣೆ ಪುಸ್ತಕ ಉಲ್ಲೇಖಿಸಿ ಗದ್ದಲ..!

By Sushmitha R
ರಾಹುಲ್ ಗಾಂಧಿಗೆ ಸದನದಲ್ಲಿ ಬ್ರೇಕ್: ಪ್ರಕಟವಾಗದ ನರವಾಣೆ ಪುಸ್ತಕ ಉಲ್ಲೇಖಿಸಿ ಗದ್ದಲ..!

ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಡೋಕ್ಲಾಮ್ ಬಿಕ್ಕಟ್ಟು ಮತ್ತು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಪುಸ್ತಕವನ್ನು ಉಲ್ಲೇಖಿಸಿದ್ದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಡೋಕ್ಲಾಮ್ ಬಿಕ್ಕಟ್ಟು ಮತ್ತು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಪುಸ್ತಕವನ್ನು ಉಲ್ಲೇಖಿಸಿದ್ದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ರಾಹುಲ್ ಗಾಂಧಿ ಅವರು ಡೋಕ್ಲಾಮ್ ವಿಷಯವನ್ನು ಪ್ರಸ್ತಾಪಿಸುತ್ತಾ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು ಬರೆದಿರುವ ಪುಸ್ತಕದ ಸಾರಾಂಶವನ್ನು ಉಲ್ಲೇಖಿಸಲು ಯತ್ನಿಸಿದರು.

ಈ ಪುಸ್ತಕದಲ್ಲಿ ಚೀನಾ ಮತ್ತು ಡೋಕ್ಲಾಮ್ ಬಿಕ್ಕಟ್ಟಿನ ಬಗ್ಗೆ ಮಹತ್ವದ ಅಂಶಗಳಿವೆ ಎಂದು ಅವರು ಪ್ರತಿಪಾದಿಸಿದರು. ಅಷ್ಟೇ ಅಲ್ಲದೆ, ಕೇಂದ್ರ ಸರ್ಕಾರವು ಈ ಪುಸ್ತಕದ ಪ್ರಕಟಣೆಯನ್ನು ಉದ್ದೇಶಪೂರ್ವಕವಾಗಿ ತಡೆಯುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.Grey Paracord Bracelet with Heart Pattern, Adjustable Woven Rope Design, Fashion Accessory

ರಾಹುಲ್ ಗಾಂಧಿ ಅವರ ಮಾತಿಗೆ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನೀವು ಉಲ್ಲೇಖಿಸುತ್ತಿರುವ ಪುಸ್ತಕವು ಇನ್ನೂ ಪ್ರಕಟಗೊಂಡೇ ಇಲ್ಲ. ಅಸ್ತಿತ್ವದಲ್ಲಿಲ್ಲದ ಅಥವಾ ಪ್ರಕಟವಾಗದ ಪುಸ್ತಕದ ಬಗ್ಗೆ ಸದನದಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕೂಡ ರಾಹುಲ್ ನಡೆಯನ್ನು ಖಂಡಿಸಿ, ಸದನವು ನಿಯಮಗಳ ಪ್ರಕಾರ ನಡೆಯಬೇಕು, ಗಾಳಿಸುದ್ದಿಗಳ ಮೇಲಲ್ಲ ಎಂದು ತಿರುಗೇಟು ನೀಡಿದರು.ಇದನ್ನು ಓದಿ: ಬೆಂಗಳೂರಲ್ಲಿ ವೆದರ್‌ ಚೇಂಜಿಂಗ್‌ ಮೋಡ್‌ - ದಿಢೀರ್‌ ಬದಲಾವಣೆ ಕುರಿತು ಎಚ್ಚರಿಸಿದ ಹವಾಮಾನ ಇಲಾಖೆ!

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕೂಡ ರಾಹುಲ್ ಗಾಂಧಿ ಅವರಿಗೆ ಎಚ್ಚರಿಕೆ ನೀಡಿ, ಸದನದ ಘನತೆಯನ್ನು ಎತ್ತಿಹಿಡಿಯುವಂತೆ ಸೂಚಿಸಿದರು. ಪ್ರಕಟವಾಗದ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ದಾಖಲಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಈ ನಡುವೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ರಾಹುಲ್ ಪರವಾಗಿ ಧ್ವನಿ ಎತ್ತಿ, ಚೀನಾ ವಿಷಯವು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ್ದರಿಂದ ಅದರ ಮೇಲೆ ಮುಕ್ತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ಇದನ್ನು ಓದಿ: ಬಜೆಟ್‌ ಪರಿಣಾಮ - ಹೇಗಿದೆ ಹೂಡಿಕೆ ಮತ್ತು ಚಿನ್ನಾಭರಣಗಳ ಮಾರುಕಟ್ಟೆ ಸ್ಥಿತಿಗತಿ!?