ಅಬ್ಬಾ ಎಂತ claimax, ಇದೇನು ಮೊದಲೇ ಕ್ಲೈಮ್ಯಾಕ್ ಅಂತಾ ಯಾಕ್ಹೇಳಿದೆ ಅಂತಂದ್ರೆ, ಅಷ್ಟು ಮನಮುಟ್ಟುವಂತೆ ಇತ್ತು ಆ ಖಾಲಿ ಹಾಳೆ!. ಒಂದು ಸಿನಿಮಾ ನೋಡಿದೆ ಅನ್ನೋಕ್ಕಿಂತ ಜೀವನದ ಅನುಭವ ಕಣ್ಣೆದುರಿಗೆ ಬಂದಂತೆ ಭಾಸವಾಯಿತು. ನಿಜಜೀವನದಲ್ಲಿ ಅರ್ಥವಾಗುವಂಥ ವಿಷಯವಸ್ತುವನ್ನು ತೆರೆಮೇಲೆ ಕಾಣೋದು ಜೊತೆಗೆ, ಒಂದೇ ನಾಡಿಮಿಡಿತದಲ್ಲಿ ಅಲ್ಲಿದ್ದ ಅಷ್ಟೂ ಪ್ರೇಕ್ಷಕರ ಹೌಹಾರಿಕೆಗೆ ಪಾತ್ರವಾದ ಈ ಸಿನಿಮಾ ನಿಜಕ್ಕೂ ಫೆಂಟಾಸ್ಟಿಕ್. ʻನಮ್ ಸಾಲಿʼ ಅನ್ನೋ ಟೈಟಲ್ ಕೇಳಿದ್ರೆ ಗೊತ್ತಾಯ್ತು, ಇದೊಂದು ಶಾಲೆ ಬಗ್ಗೆ ತೆಗೆದಿರೋ ಸಿನಿಮಾ ಇರಬಹುದು ಎಂದು., ಆದ್ರೆ ಇದು ಸಾಮಾನ್ಯ ಕಥೆ ತರ ಅಲ್ಲವೇ ಅಲ್ಲ, ನೈಜ ವಾಸ್ತವದ ಅನಾವರಣ..
ಮತ್ತೊಮ್ಮೆ ನಾನು ಹೇಳುತ್ತೇನೆ. ಕಥೆಯ claimax ನಲ್ಲಿರೊ ಖಾಲಿ ಹಾಳೆ ಜೀವನವನ್ನೇ ತೋರಿದಂತಿತ್ತು. ಗಂಗ್ಯ ಒಬ್ಬ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಯಲ್ಲ., ಬದಲಾಗಿ ಜೀವನದ ಪಾಠಶಾಲೆಯಲ್ಲಿ ಕಲಿತ ಜೀವನದರ್ಶಿ. ಅವನ ಬಾಲ್ಯದ ಮುಗ್ಧತೆ, ಅಳುವ, ಗೋಳು ಹೊಯ್ಕೊಳುವ ವರ್ತನೆ, ಬಿಟ್ಟಂಗೆ ಬಿಟ್ಟ ಹಲ್ಲು(ನಗು), ಹಠ ಗುಣ, ತುಂಟುತನ, ನೇರನುಡಿ, ನಿಜಕ್ಕೂ ಮುಗ್ಧತೆಯ ಅಹಂಕಾರ, ಸ್ವಾರ್ಥ (ಹೆಸರಿಸೋಕೆ ಪದದ ಕೊರತೆ); ಅಪ್ಪ ಅವ್ವನ ಕಷ್ಟಗಳು, ವಾಸ್ತವಿಕತೆ, ರೊಟ್ಟಿ ತಟ್ಟುವ, ಹಾಲು ಹಾಕುವ, ದನ ಕರ ಮೇಸುವ ಗ್ರಾಮೀಣ ಪ್ರದೇಶದ scenary ನಿಜಕ್ಕೂ irony!. ಆತ ಹಾಲು ಕ್ಯಾನ್ ಹಿಡಿದು ಬಿದ್ದಿದ್ದು, ನಾವೇ ಬಿದ್ದಷ್ಟು ಭಾಸವಾಯಿತು, ಅವನು ಶಾಲೆ ಬಗ್ಗೆ ಇದ್ದದ್ದು ಇದ್ದ ಹಾಗೆ ಹೇಳಿದ್ದು, ಅವರಜ್ಜಿ ಮಾಸ್ತರನಿಗೆ ಪ್ರಶ್ನಿಸಿದ್ದು, ಜನರ ಜೀವನ ವ್ಯವಧಾನ, ಗೋಗರಿಕೆ ಕುರಿತ ನೈಜತೆಯ ಅಭಿನಯ ಅಲ್ಲಿ ವ್ಯಕ್ತವಾಯಿತು. ಇದನ್ನೂ ಓದಿ: ಈ ಸಲ ಕೂಡ ಕಪ್ ನಮ್ದೇ - ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡಕ್ಕೆ 2ನೇ ಟ್ರೋಫಿ!
ಕಥೆ ಶುರುವಾದ ಮೊದಲಲ್ಲೇ ಆ ಹಳ್ಳಿಯ ದೃಶ್ಯಾವಳಿ, ವಾತಾವರಣ ನಿಜಕ್ಕೂ ಮನಮುಟ್ಟುವಂತದ್ದು. ಹಸಿರು, ಭಾಷೆಯ ಸೊಗಡು, ಗಾಡಿ, ಗಡುಸು ಮಾತು, ಬೀದಿ ಹಾದಿ ಹೀಗೆ ನೈಸರ್ಗಿಕ ಪ್ರಯತ್ನ ಅದಾಗಿತ್ತು. ವ್ಯವಸ್ಥೆಯಲ್ಲಿ ಸಿಕ್ಕಿಬಿದ್ದ ಗ್ರಾಮೀಣ ಶಿಕ್ಷಣ, ಮೂಲಸೌಕರ್ಯ ಕುಂದು-ಕೊರತೆ, ಹಳ್ಳಿಜನರ ಅವಸ್ಥೆ ಬಗ್ಗೆ ಚಿತ್ರ ಕಣ್ ತೆರೆಸುತ್ತದೆ. ಶಾಲೆ ನಮ್ಮೆಲ್ಲರ ಕಲ್ಪನೆಯ ಕನಸು ಅನ್ನೋ ನಸು ಚಿತ್ರಣ ಬಲು ಚೆಂದ, ಅಂದ ಅದ್ಭುತ ಅಂತ ವರ್ಣಿಸಿದರೆ ಅದು ಬಹುಶಃ ಅಪೂರ್ಣ. GoSriKi Women's Ethnic Co-Ord Set | Kurta Pant Set | Kurta Palazzo Set | Stylish Cotton Suit Set for Women, Festival Co-ord
ಬಾಲಕನ ಸಹಜ ನಟನೆ, ಪಾತ್ರವರ್ಗಗಳ ನೈಜ ಅಭಿವ್ಯಕ್ತಿ, cinematic transition ಎಲ್ಲವೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತವೆ. ಮೊದಲಾರ್ಧದಲ್ಲಿ ಗಂಗ್ಯ ಅಳು ನಿಲ್ಲಿಸದಿರುವುದು, ಅವರವ್ವ ಅಪ್ಪ ಕೆಲಸಕ್ಕಂತ ದೂರದೂರಿಗೆ ಬಿಟ್ಟುಹೋಗೋದು, ಸಂತೆ, ಆಟಿಕೆ ಗ್ಲಾಸು, ಒತ್ತೃಂಟೆ ಊಟ ಬಿಟ್ಟ ಮುನಿಸು, ಹಾಸ್ಯಪ್ರಜ್ಞೆ ಇವೆಲ್ಲ ಬಾಲ್ಯವನ್ನ ನೆನಪಿಸುತ್ತದೆ. ಶಾಲೆಗೆ ಹೋಗೋಕೆ ಇಷ್ಟವಿರದೆ ಹಠ ಮಾಡಿದ್ದು, ಅಮ್ಮ, ಅಜ್ಜಿ, ಅಪ್ಪ, ಸ್ನೇಹಿತರ ಪ್ರೀತಿ ತರಲೇ ಮಾತುಗಳು ಅಗಲಿಕೆ ಇವು ನೆನಪಿನಂಗಳಕ್ಕೆ ಕೊಂಡೊಯ್ಯುವಂತವು. ಆ ವಯಸ್ಸಲ್ಲಿರುವ ಏನೂ ಅರಿಯದೇ ಇದ್ದೂ, ಆ ಅಭದ್ರತೆಯಲ್ಲೂ ವಿಚಾರಗಳಿರುವ ಅಸ್ಮಿತೆಯನ್ನು ಚೆಂದವಾಗಿ ತಿಳಿಸಿದ್ದಾರೆ.
ಒಬ್ಬ ಕುರುಡು ವ್ಯಕ್ತಿ ಪಾತ್ರಧಾರಿ ಹಾಗೂ ಗಂಗ್ಯನ ನಡುವಣ ಸಂಭಾಷಣೆ, ತಾತ್ವಿಕನುಡಿ ನೇರ ನಾಟುವಂಥದ್ದು. ಒಂದು ಗ್ರಾಮ, ಜನತೆ, ಮಕ್ಕಳು, ಎಲ್ಲರೂ ಅನುಭವಿಸುವ ಅವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಡಲಾದ ಹಾಗೂ ಗ್ರಾಮೀಣ ಶಿಕ್ಷಣ, ಸರ್ಕಾರಿ ಶಾಲೆ ಅನುಯೋಗ ವಂಚಿತರಾದ ಅವಗುಣಗಳನ್ನು ಇಲ್ಲಿ ಬಹಳ ತೀವ್ರವಾಗಿ ತಿಳಿಸಲಾಗಿದೆ. ವಾಸ್ತವದ ಬೆಳಕಿಂಡಿಯನ್ನು ತೆರೆಮೇಲೆ ತಂದ ಈ ಸಿನಿಮಾ ತಂಡದವರಿಗೆ ನಿಜಕ್ಕೂ ದೊಡ್ಡ ಅಭಿನಂದನೆಗಳನ್ನು ತಿಳಿಸಲೇಬೇಕು. ಇದನ್ನೂ ಓದಿ: ಏಪ್ರಿಲ್- ಮೇ ನಲ್ಲಿ ಕರ್ನಾಟಕ ಚುನಾವಣೆ - ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗದ ಸೂಚನೆ