Skip to main content
ವಿಡಿಯೋ
1/2
politics

ಬಿಜೆಪಿಗೆ ಭರ್ಜರಿ ಜಯ, ಬಿಜೆಡಿಗೆ ಒಂದು ಸ್ಥಾನ..!

By Sushmitha R
 ಬಿಜೆಪಿಗೆ ಭರ್ಜರಿ ಜಯ, ಬಿಜೆಡಿಗೆ ಒಂದು ಸ್ಥಾನ..!

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ದೊಡ್ಡ ಗೆಲುವು ಸಿಕ್ಕಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ದೊಡ್ಡ ಗೆಲುವು ಸಿಕ್ಕಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ನಡೆದ 11 ಸ್ಥಾನಗಳ ಚುನಾವಣೆಯಲ್ಲಿ ಎನ್‌ಡಿಎ 8 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಡಿ ಒಂದು ಸ್ಥಾನ ಪಡೆದಿದೆ.

ಹರಿಯಾಣದಲ್ಲಿ ಮತದಾನದ ಗೋಪ್ಯತೆಗೆ ಸಂಬಂಧಿಸಿದ ಆಕ್ಷೇಪಗಳಿಂದಾಗಿ ಮತ ಎಣಿಕೆ ಇನ್ನೂ ಪೂರ್ಣಗೊಂಡಿಲ್ಲ.ದೇಶದ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಿತು.

ಇದರಲ್ಲಿ 7 ರಾಜ್ಯಗಳ 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಉಳಿದ 11 ಸ್ಥಾನಗಳಿಗೆ ಬಿಹಾರ (5), ಒಡಿಶಾ (4) ಮತ್ತು ಹರಿಯಾಣ (2) ರಲ್ಲಿ ಮತದಾನ ಜರುಗಿತು.

 

ಬಿಹಾರದಲ್ಲಿ ಎನ್‌ಡಿಎ ಸ್ವಚ್ಛ ಗೆಲುವು: ಬಿಹಾರದ ಎಲ್ಲಾ 5 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತಲಾ 44 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದರು. ರಾಮನಾಥ್ ಠಾಕೂರ್ ಮತ್ತು ಉಪೇಂದ್ರ ಕುಶ್ವಾಹ ತಲಾ 42 ಮತಗಳೊಂದಿಗೆ ಗೆದ್ದರು. KLOSIA Women Viscose Printed Kurta Pant Dupatta Set

ಬಿಜೆಪಿ ನಾಯಕ ಶಿವೇಶ್ ಕುಮಾರ್ 30 ಮೊದಲ ಪ್ರಾಶಸ್ತ್ಯ ಮತಗಳೊಂದಿಗೆ ಎರಡನೇ ಪ್ರಾಶಸ್ತ್ಯ ಮತಗಳ ನೆರವಿನಿಂದ ಆರ್‌ಜೆಡಿಯ ಅಭ್ಯರ್ಥಿಯನ್ನು ಸೋಲಿಸಿದರು. ಮಹಾಗಠಬಂಧನ್‌ನ 4 ಶಾಸಕರು ಕಾಂಗ್ರೆಸ್‌ನ 3, ಆರ್‌ಜೆಡಿಯ 1 ಮತದಾನಕ್ಕೆ ಬರಲಿಲ್ಲ.

ಇದರಿಂದ ಎನ್‌ಡಿಎಯ ಗೆಲುವು ಸುಲಭವಾಯಿತು. ತೇಜಸ್ವಿ ಯಾದವ್ ಹಣ ಮತ್ತು ತೋಳ್ಳಲ ಆರೋಪ ಮಾಡಿದ್ದಾರೆ.

ಒಡಿಶಾದಲ್ಲಿ ಅಡ್ಡಮತದಾನದ ಪ್ರಭಾವ: ಒಡಿಶಾದ 4 ಸ್ಥಾನಗಳಲ್ಲಿ ಬಿಜೆಪಿಯ ಇಬ್ಬರು ಮನಮೋಹನ್ ಸಮಲ್, ಸುಜಿತ್ ಕುಮಾರ್, ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರಾಯ್ ಮತ್ತು ಬಿಜೆಡಿಯ ಸಂತೃಪ್ತ ಮಿಶ್ರಾ ಗೆದ್ದಿದ್ದಾರೆ. ಬಿಜೆಡಿ ಮತ್ತು ಕಾಂಗ್ರೆಸ್ ಬೆಂಬಲಿತ ದತ್ತೇಶ್ವರ ಹೋಟಾ ಸೋತರು.ಇರಾನ್ ಅಲ್ಲ, ಅಮೆರಿಕವನ್ನೇ ಬೆಚ್ಚಿಬೀಳಿಸಿದ ಯುದ್ಧ

ಬಿಜೆಡಿಯ ಕೆಲ ಶಾಸಕರು ದೇವಿ ರಂಜನ್ ತ್ರಿಪಾಠಿ, ಸೌವಿಕ್ ಬಿಸ್ವಾಲ್ ಅಡ್ಡಮತದಾನ ಮಾಡಿದ್ದಾರೆ. ಇದನ್ನು ನವೀನ್ ಪಟ್ನಾಯಕ್ ಶಾಸಕರ ಖರೀದಿ ಎಂದು ಆರೋಪಿಸಿದ್ದಾರೆ. ಒಬ್ಬ ಶಾಸಕಿ ಎರಡನೇ ಮತಪತ್ರ ನೀಡಿದ್ದರಿಂದ ಮತದಾನ ಸ್ಥಗಿತಗೊಂಡಿತ್ತು.

ಹರಿಯಾಣದಲ್ಲಿ ಗೊಂದಲ: ಹರಿಯಾಣದಲ್ಲಿ ಮತದಾನದ ಗೋಪ್ಯತೆ ಉಲ್ಲಂಘನೆ ಆರೋಪದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿವೆ.ವಾರ್ಡ್ ಕಾರ್ಪೊರೇಟರ್ ಚುನಾವಣೆಗೆ ಸಿದ್ಧತೆ: ಮತದಾರರ ಪಟ್ಟಿ ಹೇಗೆ ಪರಿಶೀಲಿಸುವುದು...?

ಕೆಲ ಶಾಸಕರು ಮತಪತ್ರ ತೋರಿಸಿದ್ದಾರೆ ಎಂದು ಆರೋಪ. ಇದರ ಪರಿಶೀಲನೆ ಬಳಿಕ ಮತ ಎಣಿಕೆ ನಡೆಯಲಿದೆ. ಮಲ್ಲಿಕಾರ್ಜುನ್ ಖರ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.