Skip to main content
ವಿಡಿಯೋ
1/2
general

ಯುರೋಪಿನಲ್ಲಿ ಬೃಹತ್ ಚಾಕೊಲೇಟ್ ದರೋಡೆ: 12 ಟನ್ ಕಿಟ್‌ಕ್ಯಾಟ್ ಕಣ್ಮರೆ..!

By Sushmitha R
ಯುರೋಪಿನಲ್ಲಿ ಬೃಹತ್ ಚಾಕೊಲೇಟ್ ದರೋಡೆ: 12 ಟನ್ ಕಿಟ್‌ಕ್ಯಾಟ್ ಕಣ್ಮರೆ..!

ಯುರೋಪಿನಲ್ಲಿ ಅಚ್ಚರಿ ಹುಟ್ಟಿಸುವಂತಹ ದೊಡ್ಡ ಮಟ್ಟದ ಕಳ್ಳತನವೊಂದು ನಡೆದಿದೆ.

ಯುರೋಪಿನಲ್ಲಿ ಅಚ್ಚರಿ ಹುಟ್ಟಿಸುವಂತಹ ದೊಡ್ಡ ಮಟ್ಟದ ಕಳ್ಳತನವೊಂದು ನಡೆದಿದೆ. ಪ್ರಸಿದ್ಧ ಚಾಕೊಲೇಟ್ ಬ್ರ್ಯಾಂಡ್ 'ಕಿಟ್‌ಕ್ಯಾಟ್' ಅನ್ನು ತಯಾರಿಸುವ ಸ್ವಿಸ್ ಕಂಪನಿ ನೆಸ್ಲೆಯ 12 ಟನ್ ತೂಕದ ಚಾಕೊಲೇಟ್ ಸಾಗಣೆಯ ಮಧ್ಯೆಯೇ ಕಾಣೆಯಾಗಿರುವ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಧ್ಯ ಇಟಲಿಯ ಫ್ಯಾಕ್ಟರಿಯಿಂದ ಪೋಲ್ಯಾಂಡ್‌ಗೆ ಸಾಗಿಸುತ್ತಿದ್ದ ಟ್ರಕ್‌ನಲ್ಲಿ ಸುಮಾರು 4,13,793 ಕಿಟ್‌ಕ್ಯಾಟ್ ಬಾರ್‌ಗಳಿದ್ದವು.

ಈ ಸರಕು ಸಾಗಣೆಯ ವೇಳೆ ಟ್ರಕ್ ತನ್ನ ಗಮ್ಯಸ್ಥಾನವನ್ನು ತಲುಪದೇ ಮಧ್ಯದಲ್ಲೇ ನಾಪತ್ತೆಯಾಗಿದೆ. ವಾಹನ ಹಾಗೂ ಅದರಲ್ಲಿದ್ದ ಸಂಪೂರ್ಣ ಸರಕು ಇಂದಿಗೂ ಪತ್ತೆಯಾಗಿಲ್ಲ ಎಂದು ನೆಸ್ಲೆ ಕಂಪನಿ ತಿಳಿಸಿದೆ. ಈ ಕಳ್ಳತನದಲ್ಲಿ ವಿಶೇಷವಾಗಿ ಫಾರ್ಮುಲಾ-1 ಥೀಮ್‌ನ ಹೊಸ ಕಿಟ್‌ಕ್ಯಾಟ್ ಚಾಕೊಲೇಟ್‌ಗಳು ಸೇರಿದ್ದವು.

ಯುರೋಪಿನ ಮಾರುಕಟ್ಟೆಗೆ ವಿತರಣೆಗಾಗಿ ತಯಾರಿಸಲಾಗಿದ್ದ ಈ ಉತ್ಪನ್ನಗಳು ಈಗ ಕಳ್ಳತನಗೊಂಡಿವೆ. ಕಂಪನಿ ಪ್ರಕಾರ, ಪ್ರತಿಯೊಂದು ಚಾಕೊಲೇಟ್ ಮೇಲೂ ಇರುವ ಬ್ಯಾಚ್ ಕೋಡ್ ಮೂಲಕ ಕಳ್ಳತನಗೊಂಡ ವಸ್ತುಗಳನ್ನು ಗುರುತಿಸಲು ವ್ಯವಸ್ಥೆ ಮಾಡಲಾಗಿದೆ. ಯಾರಿಗಾದರೂ ಈ ಬ್ಯಾಚ್ ಕೋಡ್‌ಗಳು ಕಂಡುಬಂದಲ್ಲಿ ಕಂಪನಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.YouBella Jewellery Stylish AAA Swiss Zircon Multicolor Necklace Jewellery for Women and Girls

ಕಳ್ಳತನದ ಸಮಯದಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಕಂಪನಿ ಹೇಳಿದೆ. ನೆಸ್ಲೆ ಕಂಪನಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯ ಪೊಲೀಸ್ ಮತ್ತು ಅಧಿಕಾರಿಗಳೊಂದಿಗೆ ತನಿಖೆ ಆರಂಭಿಸಿದೆ. ಸರಕು ಸಾಗಣೆ ಕಳ್ಳತನಗಳು ಯುರೋಪಿನಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವೆಂದು ಕಂಪನಿ ಪ್ರತಿಕ್ರಿಯಿಸಿದೆ.

ಆದರೆ, ಕಂಪನಿ ಹಾಸ್ಯಭರಿತವಾಗಿ ನಮ್ಮ ಹ್ಯಾವ್ ಎ ಬ್ರೇಕ್ ಸ್ಲೋಗನ್ ಅನ್ನು ಕಳ್ಳರು ತುಂಬಾ ಸೀರಿಯಸ್‌ಲಿ ತೆಗೆದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿ ನೆಟ್‌ನಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಾಕೊಲೇಟ್ ದೋಚಾಟ' ಕುರಿತು ಹಲವು ಹಾಸ್ಯ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಚಾಕೊಲೇಟ್ ಪ್ರಿಯರಿಗೆ ಇದು ದೊಡ್ಡ ನಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.ಸಿದ್ದಗಂಗಾ ಮಠಕ್ಕೆ ಬಿ.ಎಸ್. ಯಡಿಯೂರಪ್ಪ ಭೇಟಿ: ಪೂಜ್ಯರ ಹೆಸರು ಹೇಳದೇ ನಾನು ಯಾವುದೇ ಕೆಲಸ ಮಾಡಲ್ಲ ಎಂದ ಮಾಜಿ ಸಿಎಂ!

ಈ ಘಟನೆಯು ಯುರೋಪಿನ ಲಾಜಿಸ್ಟಿಕ್ಸ್ ಭದ್ರತೆ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ. ಈಸ್ಟರ್ ಹಬ್ಬಕ್ಕೆ ಕೆಲವು ದಿನಗಳ ಮುಂಚೆಯೇ ನಡೆದ ಈ ಕಳ್ಳತನದಿಂದ ಮಾರುಕಟ್ಟೆಯಲ್ಲಿ ಕಿಟ್‌ಕ್ಯಾಟ್ ಸರಬರಾಜು ಪ್ರಭಾವಿತವಾಗುವ ಸಾಧ್ಯತೆ ಇದೆ.

ಆದರೆ ಕಂಪನಿ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ಭರವಸೆ ನೀಡಿದೆ. ಅನಧಿಕೃತ ಮಾರುಕಟ್ಟೆಗಳಲ್ಲಿ ಈ ಚಾಕೊಲೇಟ್‌ಗಳು ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಕಂಪನಿ ತಳ್ಳಿಹಾಕಿಲ್ಲ. ತನಿಖೆ ಇನ್ನೂ ಮುಂದುವರಿದಿದ್ದು, ಫಲಿತಾಂಶಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.ಉಪವಾಸದ ಸಮಯದಲ್ಲಿ ಚಹಾ ಅಥವಾ ಕಾಫಿ ಕುಡಿಯಬಹುದೇ?