ಕರ್ನಾಟಕದಲ್ಲಿ ಜನಗಣತಿ ಮೊದಲ ಹಂತವು ಇಂದು ಆರಂಭಗೊಂಡಿದೆ. ಈ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು ಎರಡನೇ ಹಂತದಲ್ಲಿ ಜನಸಂಖ್ಯೆ ಗಣತಿ ನಡೆಯಲಿದೆ.
ಈ ಬಾರಿ ಮೊದಲ ಬಾರಿಗೆ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇಂದಿನಿಂದ ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ಇದರಲ್ಲಿ ಜನರು ಸ್ವತಃ ತಮ್ಮ ಮನೆಯ ವಿವರಗಳನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಅಧಿಕೃತ ವೆಬ್ ಪೋರ್ಟಲ್ https://se.census.gov.in ಮೂಲಕ ಸುಲಭವಾಗಿ ಭಾಗವಹಿಸಬಹುದು. ಮನೆಯ ಯಾವುದೇ ಒಬ್ಬ ಸದಸ್ಯರು ಲಾಗಿನ್ ಆಗಿ ಮನೆಯ ವಿವರಗಳು, ಸದಸ್ಯರ ಮಾಹಿತಿ ಮುಂತಾದವುಗಳನ್ನು ದಾಖಲಿಸಬಹುದು. ನೋಂದಣಿ ಪೂರ್ಣಗೊಂಡ ನಂತರ ಸ್ವಯಂ ಗಣತಿ ಐಡಿ ಯನ್ನು ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ಕಳುಹಿಸಲಾಗುತ್ತದೆ.Shining Diva Fashion Necklace Jewellery Set for Women Latest Stylish Design Fancy Crystal (16787s)
ಸ್ವಯಂ ಗಣತಿಯಲ್ಲಿ ಸುಮಾರು 33 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇದು ಸುಮಾರು 15-20 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ವ್ಯವಸ್ಥೆಯು ಗಣತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಜೊತೆಗೆ ಡಿಜಿಟಲ್ ರೂಪದಲ್ಲಿ ನಿಖರ ಮಾಹಿತಿ ಸಂಗ್ರಹಕ್ಕೆ ಸಹಕಾರಿಯಾಗಲಿದೆ.
ಸ್ವಯಂ ಗಣತಿ ಅವಧಿ ಮುಗಿದ ನಂತರ, ಏಪ್ರಿಲ್ 16ರಿಂದ ಮೇ 15ರವರೆಗೆ ಎರಡನೇ ಹಂತವಾಗಿ ಗಣತಿದಾರರು ಮನೆಮನೆಗೆ ಭೇಟಿ ನೀಡುತ್ತಾರೆ. ಅವರು ಸ್ವಯಂ ಗಣತಿ ಮಾಡಿದವರ ಮಾಹಿತಿಯನ್ನು ಪರಿಶೀಲಿಸುತ್ತಾರೆ ಮತ್ತು ಬಾಕಿ ಉಳಿದ ಮನೆಗಳಲ್ಲಿ ನೇರವಾಗಿ ಗಣತಿ ನಡೆಸುತ್ತಾರೆ.ಇಂದಿನಿಂದ ಸರ್ಕಾರಿ ಕಚೇರಿಗಳ ವೇಳೆ ಬದಲಾವಣೆ; ಮೊದಲ ದಿನವೇ ಬಹುತೇಕ ಸಿಬ್ಬಂದಿ ಗೈರು..!
ಮನೆಯ ವಸತಿ ಸೌಲಭ್ಯಗಳು, ಆಸ್ತಿ ವಿವರಗಳು, ನೀರು, ವಿದ್ಯುತ್, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಜನಗಣತಿಯು ದೇಶದ ಅಭಿವೃದ್ಧಿ ಯೋಜನೆಗಳಿಗೆ ಮೂಲಭೂತ ಡೇಟಾವನ್ನು ಒದಗಿಸುತ್ತದೆ.
ಜನರು ಸ್ವಯಂ ಗಣತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಗಣತಿದಾರರಿಗೆ ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸರಿಯಾದ ಮಾಹಿತಿ ನೀಡುವುದು ಪ್ರತಿ ನಾಗರಿಕನ ಕರ್ತವ್ಯವಾಗಿದೆ.ಹೊಸ ಆರ್ಥಿಕ ವರ್ಷದ ಮೊದಲ ದಿನವೇ ದುಬಾರಿ: ನೀರಿನ, ವಿದ್ಯುತ್ ಮತ್ತು ಟೋಲ್ ದರ ಏರಿಕೆ..!