ಬಾಲಾಕೋಟ್ ಏರ್ ಸ್ಟ್ರೈಕ್ ದಿನದ ಮಹತ್ವ ಮತ್ತು ಇತಿಹಾಸ:2019ರ ಫೆಬ್ರವರಿ 26ರಂದು ಭಾರತವು ಪಾಕಿಸ್ತಾನದ ಬಾಲಾಕೋಟ್ನಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ ಯಶಸ್ವಿ ವಾಯು ದಾಳಿಯನ್ನು ನಡೆಸಿತು.ಈ ದಾಳಿ “ಪುಲ್ವಾಮಾ ದಾಳಿಗೆ” ಪ್ರತಿಕ್ರಿಯೆಯಾಗಿ ನಡೆಯಿತು. ಫೆಬ್ರವರಿ 14, 2019ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕರಿಂದ ಭಾರತೀಯ ಸೇನೆ ಮೇಲೆ ಆತ್ಮಾಹುತಿ ದಾಳಿ ನಡೆಯಿತು.ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾದರು. ಭಾರತೀಯ ವಾಯುಪಡೆ ಈ ದಾಳಿಯ ಪ್ರತೀಕಾರವಾಗಿ 2019 ರ ಫೆಬ್ರವರಿ 26 ರಂದು ಪಾಕಿಸ್ತಾನದ ಒಳಗೆ ನುಗ್ಗಿ, ಜೈಷ್-ಎ-ಮೊಹಮ್ಮದ್ ಸಂಘಟನೆಯ ತರ