ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇದೀಗ ಬಣ್ಣದ ಲೋಕದತ್ತ ಮುನ್ನುಗ್ಗಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ಅಭಿಮಾನಿಗಳ ಹೃದಯ ಗೆದ್ದಿರುವ ರೈನಾ, ತಮ್ಮ ನಟನಾ ಚೊಚ್ಚಲ ಪ್ರಯಾಣವನ್ನು ಕಾಲಿವುಡ್ನಲ್ಲಿ ಆರಂಭಿಸಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದು, ಹೊಸ ಹಾದಿಗೆ ಅವರು ಹೆಜ್ಜೆ ಇಡುತ್ತಿರುವುದು ಖಚಿತವಾಗಿದೆ.ಡ್ರೀಮ್ ನೈಟ್ ಸ್ಟೋರೀಸ್ ಎಂಬ ಹೊಸ ನಿರ್ಮಾಣ ಸಂಸ್ಥೆ, ರೈನಾ ಅಭಿನಯಿಸಲಿರುವ ಮೊದಲ ಚಿತ್ರವನ್ನು ಘೋಷಣೆ ಮಾಡಿದ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ 1 ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರವನ್ನು ‘ಮಾನ್