Skip to main content
ವಿಡಿಯೋ
1/2
spirituality

ಏನಿದು ಮೈಸೂರು ಆನೆ ದರ್ಗಾ.? ನಿಮಗದರ ಇತಿಹಾಸ ಗೊತ್ತಾ..?

By Sushmitha R
 ಏನಿದು ಮೈಸೂರು ಆನೆ ದರ್ಗಾ.?  ನಿಮಗದರ ಇತಿಹಾಸ ಗೊತ್ತಾ..?

ಮೈಸೂರಿನಲ್ಲಿರುವ ಆನೆ ದರ್ಗಾ ರಾಜ್ಯದೆಲ್ಲೆಡೆ ಜನರ ಗಮನವನ್ನು ಸೆಳೆಯುತ್ತಿದೆ. ಏನಿದು ಆನೆ ದರ್ಗಾ ಮೈಸೂರು ದಸರಾ ಸಮಯದಲ್ಲಿ ಆನೆಗಳನ್ನು ಅಲ್ಲಿಗೆ ಏಕೆ ಕರೆದುಕೊಂಡು ಹೋಗುತ್ತಾರೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ..

ಮೈಸೂರಿನ ಇತಿಹಾಸ ಎನ್ನುವುದು ಬಗೆದಷ್ಟು ಸಿಗುವಂಥ ಒಂದು ಕಥೆಗಳ ಗಣಿಯಾಗಿದೆ. ಮೈಸೂರು ಎಂದರೆ ನಮ್ಮೆಲ್ಲರ ಮನಸ್ಸಲ್ಲಿ ಮೂಡುವುದು ದಸರಾ ದೃಶ್ಯ. 16ನೇ ಶತಮಾನದ ನಂತರ ಮೈಸೂರಿನಲ್ಲಿ ದಸರಾ ಉತ್ಸವದ ಸಮಯದಲ್ಲಿ ಆನೆಗಳಿಗೆ ಮಹತ್ವ ಕೊಡಲು ಶುರು ಮಾಡಿದರು. ಈ ಸಮಯದಲ್ಲೇ ಮೈಸೂರಿನಲ್ಲಿ ದಸರಾ ಹಬ್ಬ ರಾಜ್ಯದ ಪ್ರಮುಖ ಹಬ್ಬವಾಗಿತ್ತು. ಆದರೆ ಅದರಲ್ಲಿ ಪ್ರಮುಖ ಆಕ್ಷರಣೆಯಾಗಿದ್ದು ಆನೆಗಳ ಜಂಬೂ ಸವಾರಿ. ದಸರಿಘಟ್ಟ ಚೌಡೇಶ್ವರಿ ದೇವಾಲಯದ ರಹಸ್ಯಮಯವಾದ ಮಾಹಿತಿ..!

ದೇವಿ ಚಾಮುಂಡೇಶ್ವರಿ ಮೂರ್ತಿಯನ್ನು ಹೊತ್ತು ಮೆರವಣಿಗೆ ಮಾಡುವ ಆನೆಗಳನ್ನು ನೋಡಲು ಇಂದಿಗೂ ದೇಶದ ನಾನಾ ಕಡೆಗಳಿಂದ ಜನರು ಬರುತ್ತಾರೆ. ಆನೆಗಳು ಕೇವಲ ಜಂಬೂ ಸವಾರಿಗೆ ಮಾತ್ರವಲ್ಲದೆ ಸೇನೆಯಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು. ಅವುಗಳ ಪ್ರಾಮುಖ್ಯತೆ ಎಷ್ಟಿತ್ತು ಎಂದರೆ ಒಂದು ರಾಜ್ಯದ ಆಸ್ತಿ ಎಷ್ಟಿರಬಹುದು ಎಂದು ಆನೆಗಳ ಸಂಖ್ಯೆಯನ್ನು ನೋಡಿ ಅಂದಾಜು ಮಾಡುತ್ತಿದ್ದರು. ಜೊತೆಗೆ ಅವುಗಳನ್ನು ಕುಟುಂಬದ ಸದಸ್ಯರಂತೆ ಪರಿಗಣಿಸಲಾಗುತ್ತಿತ್ತು.ತಾಯಿ ಚಾಮುಂಡೇಶ್ವರಿ ಕಥೆ - ಬೆಟ್ಟದ ಮಹಿಮೆ..!

ಏನಿದು ಆನೆ ದರ್ಗಾ.?

ದಸರಾ ಸೇವೆಯಲ್ಲಿ ತೊಡಗಿದ ಆನೆಗಳು ಮೃತಪಟ್ಟ ನಂತರ ಅವುಗಳ ದೇಹವನ್ನು ಗೌರವಾರ್ಥವಾಗಿ ಸಮಾಧಿ ಮಾಡುವ ಪದ್ಧತಿ 18 - 19 ನೇ ಶತಮಾನದಲ್ಲಿ ಪ್ರಾರಂಭವಾಯಿತು. 19 ನೇ ಶತಮಾನದಲ್ಲಿ ಪ್ರತ್ಯೇಕವಾಗಿ ಆನೆಗಳ ಸಮಾಧಿ ಸ್ಥಳ ನಜರ್ ಬಾದ್ ಪ್ರದೇಶದಲ್ಲಿ ರೂಪುಗೊಂಡಿತು. ಅದನ್ನು ಅಲ್ಲಿನ ಸ್ಥಳೀಯ ಮುಸ್ಲಿಂ ಸಮುದಾಯ ದರ್ಗಾ ಎಂದು ಕರೆಯತೊಡಗಿತು.

Amazon Brand - Symbol Men's Solid Cotton T Shirt | Round Neck | Half Sleeve | Plain-Regular Fit (Available in Plus Size and Combo Packs)

ಹಾಗಾಗಿ ಅದನ್ನು ಆನೆ ದರ್ಗಾ ಎಂದು ಕರೆಯಲಾಗುತ್ತದೆ. ಮುಂದಕ್ಕೆ ಅದನ್ನು ಹಿಂದೂ - ಮುಸಲ್ಮಾನ ಸಮುದಾಯದವರು ಹೆಚ್ಚು ಪ್ರಾಮುಖ್ಯತೆ ಕೊಡತೊಡಗಿದರು. ದಸರಾ ಸಮಯದಲ್ಲಿ ಸೇವೆ ಸಲ್ಲಿಸಿದ ಆನೆಗಳ ಸಮಾಧಿಗಳು ಆನೆ ದರ್ಗಾದಲ್ಲಿವೆ. 20 ನೇ ಶತಮಾನದಿಂದ ಈಚೆಗೆ ಪ್ರತಿ ವರ್ಷ ದಸರಾ ಸಮಯದಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಆನೆ ದರ್ಗಾಗೆ ಭೇಟಿ ಕೊಡಿಸಿ ಗೌರವ ಸಲ್ಲಿಸುವುದು ಸಂಪ್ರದಾಯವಾಗಿ ಮಾರ್ಪಟ್ಟಿತು. ಶ್ರೀ ಕೃಷ್ಣನ ಜನನ: ಸೆರೆಮನೆಯಲ್ಲಿ ಹುಟ್ಟಿದ ಕಾರಣ, ತಂದೆ-ತಾಯಿ, ರೋಮಾಂಚಕ ಘಟನೆಗಳು ಮತ್ತು ವಿಷ್ಣುವಿನ ಅವತಾರದ ಉದ್ದೇಶ..!

ಆನೆ ದರ್ಗಾ ಅನ್ನೋದು ಇಂದಿಗೂ ಮೈಸೂರು ಇತಿಹಾಸದ ಒಂದು ಜೀವಂತ ಸ್ಮಾರಕ. ಇಂದಿಗೂ ದಸರಾ ಜಂಬೂ ಸವಾರಿಯಲ್ಲಿ ಸೇವೆ ಸಲ್ಲಿಸಿದ ಆನೆಗಳು ಮೃತಪಟ್ಟಾಗ ಅದೇ ಸ್ಥಳದಲ್ಲಿ ಸಮಾಧಿ ಮಾಡಲಾಗುತ್ತದೆ. ರಾಜ್ಯ, ದೇಶ - ವಿದೇಶಗಳಿಂದ ಭಕ್ತರು, ಸಂಶೋಧಕರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಇದೊಂದು ಮೈಸೂರಿನ ಜೀವಂತ ಇತಿಹಾಸ.ತಿರುಮಲದಲ್ಲಿ "ಶ್ರೀವಾರಿ ಬ್ರಹ್ಮೋತ್ಸವಕ್ಕೆ" ಟಿಟಿಡಿ ಸಿದ್ಧತೆ: ಇಒ ಅಧಿಕಾರಿಗಳಿಂದ ತಯಾರಿಗಳ ಪರಿಶೀಲನೆ: ಎಂದು? ಯಾವಾಗ? ಇಲ್ಲಿದೆ ಮಾಹಿತಿ