ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ಜಾಲಿ ಎಲ್ ಎಲ್ ಬಿ 3 ಚಿತ್ರದ ಟ್ರೈಲರ್ ಬುಧವಾರ ಬಿಡುಗಡೆಯಾಗಿದೆ. ಹೊಸ ಟ್ರೈಲರ್ ನೋಡಿ ಅಭಿಮಾನಿಗಳಲ್ಲಿ ಚಿತ್ರಕ್ಕೆ ಹೆಚ್ಚಿನ ಕುತೂಹಲ ಮೂಡಿದೆ. ಈ ಮೂರನೇ ಭಾಗದಲ್ಲೂ ಹಿಂದಿನ ಮಹಿಳಾ ಪಾತ್ರಧಾರಿಣಿಯರನ್ನೇ ಉಳಿಸಿರುವುದರಿಂದ ಪ್ರೇಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.3 ನಿಮಿಷ 5 ಸೆಕೆಂಡಿನ ಟ್ರೈಲರ್ನಲ್ಲಿ ರೈತರ ನೋವು, ಅವರ ಕಣ್ಣೀರನ್ನು ತೋರಿಸಲಾಗಿದೆ. ಲಂಚದ ಆಧಾರದ ಮೇಲೆ ರೈತರ ಭೂಮಿಯನ್ನು ಕಬಳಿಸುವ ವ್ಯಾಪಾರಿಯ ವಿರುದ್ಧ ಹೋರಾಟವೇ ಈ ಕಥೆಯ ಕೇಂದ್ರಬಿಂದು. ಈ ಪ್ರಕರಣದಲ್ಲಿ ಅರ್ಷದ್ ವಾರ್ಸಿ ರೈತರ ಪರವಾಗಿ ವಾದಿಸುತ್ತಾರೆ, ಅಕ್ಷಯ್ ಕುಮಾರ್ ವ್ಯಾಪಾರಿಯ ಪರವಾಗಿ