Skip to main content
ವಿಡಿಯೋ
1/2
local

ಆಟೋದಲ್ಲಿ ಕಳೆದುಕೊಂಡಿದ್ದ ಯುವತಿಯ ಇಯರ್‌ ಪೋಡ್‌ ಹುಡುಕಿಕೊಟ್ಟು ಮಾನವೀಯತೆ ಮೆರೆದ ಆಟೋ ಡ್ರೈವರ್‌ ದರ್ಶನ್‌..!!

By Pavitra Ganapathi Baradavalli
ಆಟೋದಲ್ಲಿ ಕಳೆದುಕೊಂಡಿದ್ದ ಯುವತಿಯ ಇಯರ್‌ ಪೋಡ್‌ ಹುಡುಕಿಕೊಟ್ಟು ಮಾನವೀಯತೆ ಮೆರೆದ ಆಟೋ ಡ್ರೈವರ್‌ ದರ್ಶನ್‌..!!

ಸಾಮಾನ್ಯವಾಗಿ ದಿನವೊಂದರಲ್ಲಿ ನಾವು ಸಾಕಷ್ಟು ಕಡೆ ಓಡಾಟ ನಡೆಸುತ್ತಿರುತ್ತೇವೆ ಅಂತಹ ಸಂದರ್ಭದಲ್ಲಿ ಕೈಯಲ್ಲಿರುವ ವಸ್ತುಗಳನ್ನು ಸಿಕ್ಕ ಸಿಕ್ಕ ಕಡೆ ಬಿಟ್ಟು ಹೋಗುವುದೇ ಹೆಚ್ಚು ಅಂತಹದರಲ್ಲಿ ಇಲ್ಲೊಬ್ಬ ಆಟೋ ಚಾಲಕ ಮಹಿಳೆ ಬಿಟ್ಟುಹೋಗಿದ್ದ ಇಯರ್‌ ಪೋಡ್‌ಗಳನ್ನು ಮತ್ತೆ ಆಕೆಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ.

ಬೆಂಗಳೂರು: ಸಾಮಾನ್ಯವಾಗಿ ದಿನವೊಂದರಲ್ಲಿ ನಾವು ಸಾಕಷ್ಟು ಕಡೆ ಓಡಾಟ ನಡೆಸುತ್ತಿರುತ್ತೇವೆ ಅಂತಹ ಸಂದರ್ಭದಲ್ಲಿ ಕೈಯಲ್ಲಿರುವ ವಸ್ತುಗಳನ್ನು ಸಿಕ್ಕ ಸಿಕ್ಕ ಕಡೆ ಬಿಟ್ಟು ಹೋಗುವುದೇ ಹೆಚ್ಚು ಅಂತಹದರಲ್ಲಿ ಇಲ್ಲೊಬ್ಬ ಆಟೋ ಚಾಲಕ ಮಹಿಳೆ ಬಿಟ್ಟುಹೋಗಿದ್ದ ಇಯರ್‌ ಪೋಡ್‌ಗಳನ್ನು ಮತ್ತೆ ಆಕೆಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ.ಇದನ್ನೂ ಓದಿ: ಅಮೇರಿಕಾದಲ್ಲಿ ಪತ್ನಿ ಮತ್ತು ಮಗನ ಎದರೇ ಕರ್ನಾಟಕ ಮೂಲದ ವ್ಯಕ್ತಿಯ ತಲೆ ಕಟ್‌…!!


ಸಾಮಾನ್ಯವಾಗಿ ಬೆಂಗಳೂರಿನ ಆಟೋ ಚಾಲಕರ ಮೇಲೆ ಹೆಚ್ಚು ದುಡ್ಡು ತಗೋತಾರೇ ಬಿಟ್ಟು ಹೋದ ವಸ್ತುಗಳನ್ನು ನಮಗೆ ತಲುಪಿಸುವುದೇ ಇಲ್ಲ ಎಂಬ ಇಲ್ಲ ಸಲ್ಲದ ವಿಚಾರಗಳಿಗೆ ಈ ಘಟನೆ ಬಾಯಿ ಮುಚ್ಚಿಸುವಂತೆ ಮಾಡಿದೆ.

ಒಬ್ಬ ವಿದೇಶಿ ಮಹಿಳೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗೋದಕ್ಕೆ ಆಟೋ ಬುಕ್‌ ಮಾಡಿದ್ದಾಳೆ. ಆಟೋ ಹತ್ತಿ ಆ ಸ್ಥಳಕ್ಕೆ ಹೋಗಿ ಇಳಿಯುವ ಸಂದರ್ಭದಲ್ಲಿ ತನ್ನ ಇಯರ್‌ ಪೋಡ್‌ಗಳನ್ನ ಆಟೋದಲ್ಲಿಯೇ ಬಿಟ್ಟು ತೆರಳಿದ್ದಾಳೆ.ಇದನ್ನೂ ಓದಿ: ಅಸ್ಥಿಪಂಜರಗಳ ಹುಡುಕಾಟ: ಬಂಗ್ಲಗುಡ್ಡದಲ್ಲಿ ಎಸ್‌ಐಟಿ ತೀವ್ರ ಕಾರ್ಯಾಚರಣೆ..!

ನಂತರ ಇನ್ನೊಂದು ಆಟೋ ಬುಕ್‌ ಮಾಡಿಕೊಂಡು ತೆರಳಿದ್ದಾಳೆ ಆ ಆಟೋದಲ್ಲಿ ತೆರಳುವ ವೇಳೆ ಹಿಂದೆ ಹತ್ತಿದ ಆಟೋದಲ್ಲಿಯೇ ತನ್ನ ಇಯರ್‌ ಪೋಡ್‌ ಬಿಟ್ಟು ಬಂದಿರುವುದು ನೆನಪಾಗಿದೆ ಅದನ್ನ ಆಟೋ ಡ್ರೈವರ್‌ ದರ್ಶನ್‌ ಬಳಿ ತಿಳಿಸಿದ್ದಾಳೆ. ತಕ್ಷಣ ಆಟೋ ಡ್ರೈವರ್‌ ಬುಕ್‌ ಮಾಡಿದ ಮಾಹಿತಿಗಳನ್ನು ಬಳಸಿಕೊಂಡು ಸತತ ಒಂದುವರೆ ಗಂಟೆ ಶ್ರಮ ಪಟ್ಟು ಆಕೆಗೆ ಆಕೆಯ ಇಯರ್‌ ಪೋಡ್‌ಗಳನ್ನು ಮರಳಿಸುವಲ್ಲಿ ಯಶಸ್ವಿಯಾಗಿದ್ದಾನೆ.ಇದನ್ನೂ ಓದಿ: ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಹೆಸರಿನ ಹಿನ್ನೆಲೆ: ತಾಯಿ ಜಾನಕಿ ಹೇಳಿದ್ದು ಏನು?


ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಹೃದಯವನ್ನು ಗೆದ್ದಿದೆ. ಆಟೋ ಡ್ರೈವರ್‌ಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಜನಕ್ಕೆ ಈ ಘಟನೆ ಬಾಯಿ ಮುಚ್ಚುವಂತೆ ಮಾಡಿದೆ. ಈ ಘಟನೆಯಿಂದ ಆಟೋ ಡ್ರೈವರ್‌ಗಳ ನ್ಯಾಯ ಪರತೆ, ನ್ಯಾಯ ನಿಷ್ಠೆ ಮತ್ತು ನಿಸ್ವಾರ್ಥ ಮನೋಭಾವ ಹಾಗೇಯೇ ಸಾಮಾಜಿಕ ಕಳಕಳಿಯ ಕುರಿತು ಅರಿವು ಮೂಡಿಸುವಂತಿದೆ.Noise Buds VS104 Truly Wireless Earbuds with 45H of Playtime, Quad Mic with ENC, Instacharge(10 Min=200 Min), 13Mm Driver, Low Latency, BT V5.2 (Snow White)