ನವದೆಹಲಿ : ನಿನ್ನೆ ಹಾಸನದ ಮೊಸಳೆ ಹೊಸಳ್ಳಿಯಲ್ಲಿ ನಡೆದ ದುರಂತ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಗಣೇಶ ವಿಸರ್ಜನೆಯಲ್ಲಿ ಪಾಲ್ಗೊಂಡವರ ಮೇಲೆ ಕ್ಯಾಂಟರ್ ಹರಿದ ಭೀಕರ ಘಟನೆ ನಡೆದಿದೆ. ಈ ಘಟನೆಯಲ್ಲಿ 9 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಾಸನದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಇದೀಗ ಹಾಸನ ದುರಂತ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.ಇದನ್ನೂ ಓದಿ: ಭಟ್ಕಳದಲ್ಲಿ ಜಾನುವಾರು ಎಲುಬುಗಳ ರಹಸ್ಯ:ಜಾನುವಾರು ಎಲುಬು ಪತ್ತೆಯ ನಂತರ ದೂರದಾತನ ಮೇಲೆ ಕೇಸ್ ದಾಖಲು
ಘಟನೆ ಕುರಿತು ಟ್ವೀಟ್ ಮಾಡಿರುವ ಮೋದಿ ಕಾರ್ಯಾಲಯ ತೀವ್ರ ಆಘಾತ ವ್ಯಕ್ತಪಡಿಸಿದೆ. ಕರ್ನಾಟಕದ ಹಾಸನದಲ್ಲಿ ನಡೆದ ಘಟನೆ ಎಲ್ಲರಲ್ಲೂ ಭಯ ಹುಟ್ಟಿಸಿದೆ. ಈ ದುರಂತ ಸಮಯದಲ್ಲಿ ನಾನು ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರು ಮತ್ತು ಘಟನೆಯಲ್ಲಿ ಗಾಯಗೊಂಡವರ ಜೊತೆಗಿದ್ದೇನೆ . ಈ ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ PMNRF ನಿಧಿಯಿಂದ 2ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50,000 ಪರಿಹಾರ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.ಅಮ್ರೋಹಾ ಚಿಕನ್ ಕಲಹ: ಸಸ್ಯಹಾರಿ ರೀನಾ ಆತ್ಮಹತ್ಯೆ; ಗಂಗೆಯಲ್ಲಿ ಶವ ಮುಳುಗಿಸಿ ನಾಪತ್ತೆ ದೂರು..!
ಮೊಸಳೆ ಹೊಸಳ್ಳಿಯಲ್ಲಿ ಗಣೇಶ ಕೂರಿಸಿ ಕಳೆದ ಕೆಲದಿನಗಳಿಂದ ಪ್ರತಿ ದಿನ ಪೂಜೆ ನೆರೇವೇರಿತ್ತು. ಇಡೀ ಗ್ರಾಮಸ್ಥರು ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು. ನಿನ್ನೆ ರಾತ್ರಿ ಗಣೇಶ ವಿಸರ್ಜನೆ ಹಿನ್ನಲೆಯಲ್ಲಿ ಪೂಜೆಗಳು ನೆರವೇರಿತ್ತು. ಬಳಿಕ ಅದ್ದೂರಿಯಾಗಿ ಗಣೇಶ ವಿಸರ್ಜನೆ ಮೆರವಣಿಗೆ ಆರಂಭಗೊಂಡಿತ್ತು. ಸ್ಥಳೀಯರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗಂಟೆಗಳ ಕಾಲ ಸಾಗಿ ಬಂದ ಮೆರವಣಿಗೆ ಇನ್ನೇನು 10 ನಿಮಿಷದಲ್ಲಿ ಅಂತ್ಯಗೊಳ್ಳುತ್ತಿತ್ತು. ಬಳಿಕ ಗಣೇಶ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ 10 ನಿಮಿಷ ಬಾಕಿ ಇರುವಾಗಲೇ ಕ್ಯಾಂಟರ್ ಹರಿದು ದುರಂತ ಸಂಭವಿಸಿದೆ.ಇದನ್ನೂ ಓದಿ: ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಲಾರಿಗೆ ಆಟೋ ಡಿಕ್ಕಿ: ಮೂವರ ದುರ್ಮರಣ
ಕ್ಯಾಂಟರ್ ಅತೀ ವೇಗದಿಂದ ಬಂದು ಅಪ್ಪಳಿಸಿದೆ. ಮುಂದೆ ಸಾಗುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಡಿವೈಡರ್ ಹಾರಿ ವಿದ್ಯಾರ್ಥಿಗಳ ಮೇಲೆ ಹರಿದಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಂಪಾಗಿ ಪಾಲ್ಗೊಂಡಿದ್ದರು. ಚಾಲಕನ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿದೆ. ವಿದ್ಯಾರ್ಥಿಗಳ ಮೇಲೆ ಕ್ಯಾಂಟರ್ ಹರಿದ ಕಾರಣ ಸ್ಥಳದಲ್ಲೇ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 27ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಈ ಪೈಕಿ ಮೂವರು ಪರಿಸ್ಥಿತಿ ಗಂಭೀರವಾಗಿದೆ.ಇದನ್ನೂ ಓದಿ: ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಮಹಾ ದುರಂತ...ಕ್ಯಾಂಟರ್ ಡಿಕ್ಕಿ, 9 ಮಂದಿ ದುರ್ಮರಣ!
ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಘಟನೆಗೆ ಸರ್ಕಾರ ಹಾಗೂ ಸಚಿವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬದ ಜೊತೆ ಸರ್ಕಾರ ನಿಲ್ಲುವುದಾಗಿ ಹೇಳಿದೆ.ಇದನ್ನೂ ಓದಿ: ಟೇಕ್ ಆಫ್ ಬಳಿಕ ಕೆಳಗುರುಳಿದ ವಿಮಾನ ಚಕ್ರ - ಸ್ಪೈಸ್ ಜೆಟ್ ವಿಮಾನ ಮುಂಬೈನಲ್ಲಿ ಹಾಲ್ಟ್!
ದುರಂತಕ್ಕೆ ಕಾರಣವಾದ ಚಾಲಕ ಭುವನೇಶ್ವರ್ನನ್ನು ಪೊಲೀಸರು ಬಂಧಿಸಿದ್ದಾರೆ. ಅತೀ ವೇಗದ ಚಾಲನೆ, ಅಜಾಗರೂಕತೆ ಘಟನೆಗೆ ಪ್ರಮುಖ ಕಾರಣವಾಗಿದೆ. ಇನ್ನು ಪ್ರತ್ಯಕ್ಷ ದರ್ಶಿಗಳ ಪ್ರಕಾರ ಚಾಲಕ ಮದ್ಯಾಪಾನ ಮಾಡಿದ್ದ ಎಂದು ಆರೋಪಿಸಿದ್ದಾರೆ.Noise Two Wireless On Ear Headphones with 50 Hours Playtime, Low Latency(up to 40ms), 4 Play Modes, Dual Pairing, BT v5.3 (Bold Black)