Skip to main content
ವಿಡಿಯೋ
1/2
crime

ಕೃಷಿ ಮೇಳದ ಸಂದರ್ಭದಲ್ಲಿ ವ್ಯಕ್ತಿಯ ಮೇಲೆ ಟ್ರ್ಯಾಕ್ಟರ್‌ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು..!!

By Pavitra Ganapathi Baradavalli
ಕೃಷಿ ಮೇಳದ ಸಂದರ್ಭದಲ್ಲಿ ವ್ಯಕ್ತಿಯ ಮೇಲೆ ಟ್ರ್ಯಾಕ್ಟರ್‌ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು..!!

 ದೈನಂದಿನ ಜಗತ್ತಿನಲ್ಲಿ ಸಾವಿರಾರು ಮಂದಿ ಜನಿಸುತ್ತಾರೆ ಹಾಗೇ ಸಾವಿರಾರು ಜನ ಹುಟ್ಟುತ್ತಾರೆ. ಹಾಗೇ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ (Dharwad Agriculture University)  ನಡೆದ ಕೃಷಿ ಮೇಳದಲ್ಲಿ (Krishi Mela)  ವ್ಯಕ್ತಿಯೊಬ್ಬರ ಮೇಲೆ ಟ್ರ್ಯಾಕ್ಟರ್‌ ವಾಹನ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಧಾರವಾಡ: ದೈನಂದಿನ ಜಗತ್ತಿನಲ್ಲಿ ಸಾವಿರಾರು ಮಂದಿ ಜನಿಸುತ್ತಾರೆ ಹಾಗೇ ಸಾವಿರಾರು ಜನ ಹುಟ್ಟುತ್ತಾರೆ. ಹಾಗೇ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ (Dharwad Agriculture University)  ನಡೆದ ಕೃಷಿ ಮೇಳದಲ್ಲಿ (Krishi Mela)  ವ್ಯಕ್ತಿಯೊಬ್ಬರ ಮೇಲೆ ಟ್ರ್ಯಾಕ್ಟರ್‌ ವಾಹನ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.ಇದನ್ನೂ ಓದಿ: ವಿವಾದದ ನಡುವೆ ವೆನಿಸ್‌ ಚಲನಚಿತ್ರ ಪ್ರಶಸ್ತಿ ವಿಜೇತೆ ಅನುಪರ್ಣ ರಾಯ್‌ - ಟೀಕಾಕಾರರಿಗೆ ಕೊಟ್ಟ ದಿಟ್ಟ ಉತ್ತರವೇನು ಗೊತ್ತಾ? 


60 ವರ್ಷದ ಪರಶುರಾಮ.ಎಂ ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆಂದು ತಂದಿದ್ದ ಟ್ರ್ಯಾಕ್ಟರ್‌ ಅನ್ನು ಲಾರಿಯಿಂದ ಇಳಿಸುತ್ತಿದ್ದ ವೇಳೆ ವ್ಯಕ್ತಿಯ ಮೈಮೇಲೆ ಏಕಾಏಕಿ ಟ್ರ್ಯಾಕ್ಟರ್‌ ಬಿದ್ದಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾಮನ್ನಪ್ಪಿದ್ದು, ಕೃಷಿ ಮೇಳ ನಡೆಯಬೇಕಿದ್ದ ಮೊದಲನೇ ದಿನವೇ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಗುಡ್ಡ ಕುಸಿತ, ಗೇರುಸೊಪ್ಪ ವಿದ್ಯುತ್‌ ಉತ್ವಾದನಾ ಘಟಕದ ಬಳಿಯೇ ಧರೆ ಕುಸಿತ…!!

ಘಟನೆ ಬೆಳಕಿಗೆ ಬರುತ್ತಿದ್ದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಕೃಷಿ ವಿವಿ ಕುಲಪತಿಯವರಿಂದ ಮಾಹಿತಿ ಕಲೆ ಹಾಕಿದರು. ನಂತರ ಮಾತನಾಡಿದ ಅವರು ಘಟನೆಯ ಬಗ್ಗೆ ತನಿಖೆ ನಡೆದಿದೆ. ಸ್ಟಾಲ್‌ ಹಾಕಿದವರು ವಸ್ತುಗಳನ್ನು ತರಿಸಿಕೊಳ್ಳುವಾಗ ಸ್ವಲ್ಪ ಜಾಗರೂಕತೆಯಿಂದ ನಿಗಾ ವಹಿಸಿ ಕಾರ್ಯವನ್ನು ಕೈಗೊಳ್ಳಬೇಕಿತ್ತು.  ಸ್ಟಾಲ್‌ ಹಾಕಿದವರ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ.ಇದನ್ನೂ ಓದಿ: ಹಾಸನ ದುರಂತ: ಸಚಿವ ಕೃಷ್ಣಬೈರೇಗೌಡರನ್ನು ತರಾಟೆಗೆ ತೆಗೆದುಕೊಂಡು ಜನ ಆಕ್ರೋಶ..!


ಅದೂ ಅಲ್ಲದೆ ಟ್ರ್ಯಾಕ್ಟರ್‌ ಅನ್ನು ಇಳಿಸಲು ಸರಿಯಾದ ಜಾಗದ ವ್ಯವಸ್ಥೆ ಇರದ ಕಾರಣ ಈ ಘಟನೆ ನಡೆದಿದೆ ಎಂದಿದ್ದಾರೆ. ಬಳಿಕ ಪೊಲೀಸರು ಮೃತದೇಹವನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಕುರಿತು ಕೇಸ್‌ ದಾಖಲಿಸಿಕೊಳ್ಳಲಾಗಿದೆ.GOBOULT K40 True Wireless in Ear Earbuds with 48H Playtime, Clear Calling 4 Mics, 45ms Low Latency Gaming, Premium Grip, 13mm Bass Drivers, Type-C Fast Charging, BTv 5.3 Ear Buds TWS (Denim Blue)