ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಈಗಾಗಲೇ ಹನ್ನೊಂದು ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಕಾರ್ಯಕ್ರಮ ಕರ್ನಾಟಕದಲ್ಲಿ ಶೇಕಡ 82ರಷ್ಟು ಟಿವಿ ವೀಕ್ಷಕರನ್ನು ತಲುಪಿರುವುದು ವಿಶೇಷ. ರಾಜ್ಯದ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.ಕಳೆದ ಒಂದು ದಶಕದಿಂದ ಪ್ರಸಾರವಾಗುತ್ತಿರುವ ಈ ಶೋ, ಮನರಂಜನೆಗೆ ಕೊರತೆ ಇಲ್ಲದಂತೆ ಎಲ್ಲರ ಗಮನ ಸೆಳೆದಿದೆ. ಈಗ 12ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 28 ರಿಂದ 'ಬಿಗ್ ಬಾಸ್ ಕನ್ನಡ ಸೀಸನ್ 12' ಶುರುವಾಗಲಿದ್ದು, ಕಿಚ್ಚ ಸುದೀಪ್ ಎಂದಿನಂತೆ ನಿರೂಪಣೆ ಮಾಡಲಿದ್ದಾರೆ.ಸುದೀಪ್ ಅವರು ಕಳೆದ 11 ಸೀಸನ್ಗಳನ್ನು ಅತ್ಯಂತ ಯಶಸ್ವಿ