ಬೆಂಗಳೂರು: ಸಂಚಾರಿ ಬಸ್‌ಗಳು ಅಂದರೆ ನಮಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗೋದಕ್ಕೆ ಸಹಾಯಕವಾಗುತ್ತದೆ ಅದರಲ್ಲೂ ಸರ್ಕಾರಿ ಸಂಚಾರ ಬಸ್‌ಗಳು ದಿನನಿತ್ಯ ಓಡಾಟ ನಡೆಸುತ್ತಲೇ ಇರುತ್ತವೆ. ಆದರೆ ದೈನಂದಿನ ಸಂಚಾರ ನಡೆಸುವ ಸರ್ಕಾರಿ ಬಸ್‌ಗಳೇ ಸಂಚಾರಿ ನಿಯಮ ಮುರಿದು ಓಡಾಟ ನಡೆಸಿದರೆ ಫೈನ್ ಬೀಳುವುದಂತೂ ಕಟ್ಟಿಟ್ಟ ಬುತ್ತಿ ಹಾಗೇ ಮಾಡಿ ಒಟ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳ ಸಂಖ್ಯೆ 2,69,198 ಆಗಿದೆ.ಇದನ್ನೂ ಓದಿ: ಸಚಿವ ಶ್ರೀ ಸಂತೋಷ್ ಲಾಡ್‌ರಿಂದ ಕೂಡಗು ಪ್ರವಾಸ: ಕೊಡಗಿನ ಕಾಫಿ ಬೆಳೆಗಾರರು & ಹೋಂ ಸ್ಟೇ ನಿರ್ವಹಣಗಾರರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ
ಜೊತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ತೆರಬೇಕಾದ ದಂಡದ ಪ್ರಮಾಣ ಒಟ್ಟು 13 ಕೋಟಿಗಳಷ್ಟಾಗಿದೆ. ಆದರೆ ಅದರ ಮೇಲಿನ ಟ್ರಾಫಿಕ್ ಫೈನ್ ಅನ್ನು ಮನ್ನಾ ಮಾಡುವಂತೆ ಸಾರಿಗೆ ಸಚಿರಾದ ರಾಮಲಿಂಗಾರೆಡ್ಡಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಒಟ್ಟು ಕೆಎಸ್‌ಆರ್‌ಟಿಸಿ ಸಾರಿಗೆ ನಿಗಮ ಪಾವತಿ ಮಾಡಬೇಕಾದ ಮೊತ್ತ ಶೇಕಡಾ 50 ರಷ್ಟು ರಿಯಾಯಿತಿ ಪ್ರಮಾಣದಲ್ಲಿ ಒಟ್ಟು ದಂಡ ಮೊತ್ತ 6,64,96,400 ರೂಪಾಯಿಗಳಾಗುತ್ತವೆ.ಆದರೆ ಈ ದಂಡವನ್ನು ಮನ್ನಾ ಮಾಡುವಂತೆ ಗೃಹ ಸಚಿವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಮನವಿ ಮಾಡಿದ್ದಾರೆ.ಇದನ್ನೂ ಓದಿ: ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಬಂಧನ ಸ್ವಾಗತಿಸಿದ ಶಾಸಕ ಶ್ರೀವತ್ಸ….!!
ರಾಜ್ಯದಲ್ಲಿ ಒಟ್ಟು 24,000 ಬಸ್ಗಳಿವೆ. ಕೆಲ ವೇಳೆ ಸಿಸಿಟಿವಿಯಲ್ಲಿ ತಪ್ಪಾಗಿ ರೆಕಾರ್ಡ್ ಆಗಿದೆ. ಒಟ್ಟು ಪ್ರಕರಣಗಳನ್ನು ಪರಿಶೀಲಿಸಿದಾಗ, 1,95,009 ಪ್ರಕರಣಗಳು Lane Discipline Violationಗೆ ಸಂಬಂಧಿಸಿದ್ದು. ವಾಹನಗಳು ಲೇನ್ನಲ್ಲಿ ಚಲಿಸುವಾಗ ಲೇನ್ ಪಟ್ಟಿಗಳನ್ನು ಸ್ವಲ್ಪ ತಾಗಿದರೂ ಸಹ ಸದರಿ ಸ್ಥಳದಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಲೇನ್ ಉಲ್ಲಂಘನೆ ಎಂದು ದಂಡ ವಿಧಿಸಲಾಗುತ್ತಿದೆ.ಇದನ್ನೂ ಓದಿ: ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನಾ ಸಮಾರಂಭ..!
58,499 ಪ್ರಕರಣಗಳು ಸೀಟ್ ಬೆಲ್ಟ್ ಧರಿಸದೇ ಇರುವ ಬಗ್ಗೆ ದಾಖಲಾಗಿದೆ. ಸೀಲ್ಟ್ ಬೆಲ್ಟ್ ಹಾಕಿದ್ದರೂ ಪ್ರಕರಣಗಳು ದಾಖಲಾಗುತ್ತಿವೆ. ನಿಯಮದಂತೆ ಒಂದು ಅಪರಾಧಕ್ಕೆ ಸಂಬಂಧಪಟ್ಟಂತೆ 24 ಗಂಟೆಯ ಅವಧಿಯಲ್ಲಿ ಒಂದು ಬಾರಿ ದಂಡ ವಿಧಿಸಿ ರಶೀದಿ ಪಡೆದಿದ್ದಲ್ಲಿ ಬೇರೊಂದು ಕಡೆ ಸದರಿ ರಸೀದಿ ತೋರಿದಲ್ಲಿ ಪುನಃ ವಿಧಿಸಿರುವ ದಂಡದಿಂದ ವಿನಾಯಿತಿ ಇರುತ್ತಿತ್ತು. ಆದರೆ, ಪ್ರಸ್ತುತ ಹೈವೇಯಲ್ಲಿ ಜಿಲ್ಲಾವಾರು ಪ್ರಕರಣಗಳು ದಾಖಲಾಗುತ್ತಿವೆ.ಇದನ್ನೂ ಓದಿ: ನಂಜೇಗೌಡರ ಗೆಲುವಿಗೆ ಅಸಿಂಧು ತೀರ್ಪು! ಹೈಕೋರ್ಟ್ ಹೇಳಿದ ಪ್ರಮುಖ ಕಾರಣಗಳು ಏನೇನು ಗೊತ್ತಾ?
ಉದಾಹರಣೆಗೆ, ಒಂದೇ ದಿನದಲ್ಲಿ ರಾಮನಗರ, ಮಂಡ್ಯ, ಮೈಸೂರು ಜಿಲ್ಲಾವಾರು ಒಂದೇ ವಾಹನಕ್ಕೆ ಒಂದೇ ತರಹದ ಉಲ್ಲಂಘನೆಗೆ ದಂಡಗಳನ್ನು ಹಾಕಲಾಗಿದೆ. ಒಟ್ಟು 2,69,198 ಪ್ರಕರಣಗಳ ಪೈಕಿ 2,53,508 ಪ್ರಕರಣಗಳು ಮೇಲಿನ ಎರಡು ವಿಧವಾದ ಪ್ರಕರಣಗಳಿಂದ ಕೂಡಿರುತ್ತದೆ. ಈ ರೀತಿಯಾದ ಪ್ರಮುಖ ವಿಚಾರಗಳನ್ನು ಗೃಹ ಸಚಿವರ ಗಮನಕ್ಕೆ ತಂದು ದಂಡವನ್ನು ಮನ್ನಾ ಮಾಡುವಂತೆ ಸಾರಿಗೆ ಸಚಿವರು ಪತ್ರದ ಮೂಲಕ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.NUAPATANAPATA Women's Sambalpuri Pure Cotton Saree-C