Skip to main content
ವಿಡಿಯೋ
1/2
politics

ನರೇಂದ್ರ ಮೋದಿ ಆಗಮನದಿಂದ ಸ್ವಚ್ಛ ಆಡಳಿತ ಸ್ಥಾಪನೆ : ಆರ್‌. ಅಶೋಕ್‌ ಹೇಳಿಕೆ

By Pavitra Ganapathi Baradavalli
ನರೇಂದ್ರ ಮೋದಿ ಆಗಮನದಿಂದ ಸ್ವಚ್ಛ ಆಡಳಿತ ಸ್ಥಾಪನೆ : ಆರ್‌. ಅಶೋಕ್‌ ಹೇಳಿಕೆ

ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಯುಪಿಎ ಸರ್ಕಾರ ಕುಟುಂಬ ರಾಜಕಾರಣದ ಮೂಲಕ ಭ್ರಷ್ಟ ಆಡಳಿತ ನಡೆಸಿತ್ತು ಎಂದು ಟೀಕಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಸ್ವಯಂಸೇವಕನಿಂದ ಆರಂಭಿಸಿ, ಮುಖ್ಯಮಂತ್ರಿಯಾಗಿ, ನಂತರ ಪ್ರಧಾನಿಯಾಗಿ ಬೆಳೆದವರು. ಕಾಂಗ್ರೆಸ್‌ನ ಕುಟುಂಬದಲ್ಲಿ ಹುಟ್ಟಿದ್ದರೆ ನೇರವಾಗಿ ಪಕ್ಷದ ಅಧ್ಯಕ್ಷರಾಗಬಹುದಿತ್ತು.

ಬೆಂಗಳೂರು: ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಯುಪಿಎ ಸರ್ಕಾರ ಕುಟುಂಬ ರಾಜಕಾರಣದ ಮೂಲಕ ಭ್ರಷ್ಟ ಆಡಳಿತ ನಡೆಸಿತ್ತು ಎಂದು ಟೀಕಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಸ್ವಯಂಸೇವಕನಿಂದ ಆರಂಭಿಸಿ, ಮುಖ್ಯಮಂತ್ರಿಯಾಗಿ, ನಂತರ ಪ್ರಧಾನಿಯಾಗಿ ಬೆಳೆದವರು. ಕಾಂಗ್ರೆಸ್‌ನ ಕುಟುಂಬದಲ್ಲಿ ಹುಟ್ಟಿದ್ದರೆ ನೇರವಾಗಿ ಪಕ್ಷದ ಅಧ್ಯಕ್ಷರಾಗಬಹುದಿತ್ತು. ಆದರೆ, ಮನಮೋಹನ್ ಸಿಂಗ್ ಅವಧಿಯಲ್ಲಿ ಎಲ್ಲ ಬಗೆಯ ಭ್ರಷ್ಟಾಚಾರ ನಡೆದಿತ್ತು. ಮೋದಿಯವರು ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ ನೀಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿಯಮ ಉಲ್ಲಂಘನೆಗೆ ಬಿದ್ದ ಫೈನ್‌ ರದ್ದು ಕೋರಿ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಗೃಹ ಸಚಿವರಿಗೆ ಪತ್ರ..!!


ಕಾಂಗ್ರೆಸ್‌ನವರು ಇವಿಎಂ ಕುರಿತು ಪ್ರಧಾನಿಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಗೆದ್ದಾಗ ಮಾತನಾಡದವರು ಸೋತಾಗ ಆರೋಪಿಸುತ್ತಾರೆ. ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕನೇ ಅಕ್ರಮದಿಂದ ಗೆದ್ದಿದ್ದಾನೆ ಎಂದು ಕೋರ್ಟ್ ತೀರ್ಪು ನೀಡಿದೆ. ಬಿಹಾರದಲ್ಲಿ ಸೋಲಿನ ಭಯದಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಮೋದಿಯವರು ಇಂತಹ ಆರೋಪಗಳಿಗೆ ತಲೆಕೆಡಿಸಿಕೊಳ್ಳದೇ ದೇಶಸೇವೆಯಲ್ಲಿ ತೊಡಗಿದ್ದಾರೆ. ಮೋದಿ ಮುಂದೆಯೂ ಪ್ರಧಾನಿಯಾಗಿ ದೇಶವನ್ನು ವಿಶ್ವದ ನಂ.1 ಸ್ಥಾನಕ್ಕೆ ಏರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನೂ ಓದಿ: ಸಚಿವ ಶ್ರೀ ಸಂತೋಷ್ ಲಾಡ್‌ರಿಂದ ಕೂಡಗು ಪ್ರವಾಸ: ಕೊಡಗಿನ ಕಾಫಿ ಬೆಳೆಗಾರರು & ಹೋಂ ಸ್ಟೇ ನಿರ್ವಹಣಗಾರರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ

ಭಾರತ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಸೇನಾಬಲದಲ್ಲಿ ಐದನೇ ಸ್ಥಾನದಲ್ಲಿದೆ. ಚೀನಾ ಮತ್ತು ಅಮೆರಿಕ ಕೂಡ ಭಾರತದ ಸ್ನೇಹವನ್ನು ಬಯಸುತ್ತವೆ. ಇದಕ್ಕೆ ಕಾರಣ ಮೋದಿಯವರ ನಾಯಕತ್ವ. ಬಿಜೆಪಿಯಲ್ಲಿ ವಯಸ್ಸಿನ ಆಧಾರದಲ್ಲಿ ಯಾರನ್ನೂ ಮನೆಗೆ ಕಳುಹಿಸಿಲ್ಲ. ಅನೇಕ ವಯಸ್ಸಾದ ನಾಯಕರು ಇನ್ನೂ ಕೆಲಸ ಮಾಡುತ್ತಿದ್ದಾರೆ. ಮೋದಿಯವರು ಮುಂದೆಯೂ ಪ್ರಧಾನಿಯಾಗಿ ಸೇವೆ ಸಲ್ಲಿಸಲಿ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರ 13 ಲಕ್ಷ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸುವುದಾಗಿ ಹೇಳಿಕೊಂಡಿದೆ, ಆದರೆ ಒಳಗೊಳಗೆ 25 ಲಕ್ಷ ಕಾರ್ಡ್‌ಗಳನ್ನು ರದ್ದುಗೊಳಿಸಲಿದೆ. ಇದರಿಂದ ಬಡವರಿಗೆ ಯಾವುದೇ ಸೌಲಭ್ಯ ಸಿಗದಂತಾಗುತ್ತದೆ. ರೇಷನ್ ಕಾರ್ಡ್ ಇದ್ದವರಿಗೆ ಉಚಿತ ಔಷಧಿ, ಚಿಕಿತ್ಸೆ ಲಭ್ಯವಿದೆ, ಇದರಿಂದ ಹಣ ಉಳಿತಾಯವಾಗುತ್ತದೆ.ಇದನ್ನೂ ಓದಿ: ಮಾಜಿ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಬಂಧನ ಸ್ವಾಗತಿಸಿದ ಶಾಸಕ ಶ್ರೀವತ್ಸ….!!

ಆದರೆ, ಈ ಸೌಲಭ್ಯಗಳು ಬಡವರಿಗೆ ಸ್ಥಗಿತಗೊಳ್ಳಲಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದೆ ಸುರಂಗ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರಿಂಗ್ ರಸ್ತೆಯಲ್ಲಿ ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಬಿಎಂಟಿಸಿ ಬಸ್‌ಗಳು ನಿಧಾನವಾಗಿ ಚಲಿಸುತ್ತಿವೆ. ಅನೇಕ ಐಟಿ ಕಂಪನಿಗಳು ಹೈದರಾಬಾದ್ ಮತ್ತು ಚೆನ್ನೈಗೆ ತೆರಳಲು ಯತ್ನಿಸುತ್ತಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೂ 100 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ ಈಗ ಅನುದಾನವೇ ಇಲ್ಲ ಎಂದು ಟೀಕಿಸಿದರು.ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಫೈನಲ್‌ಗೆ ಪ್ರವೇಶ..!

ಕಾಂಗ್ರೆಸ್ ಸರ್ಕಾರ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಜಾತಿ ಸಮೀಕ್ಷೆಗೆ ಹಣ ವ್ಯರ್ಥ ಮಾಡದೆ ಮುಂದೂಡುವುದು ಒಳಿತು. ಹಬ್ಬದ ಸಂದರ್ಭದಲ್ಲಿ ಸಮೀಕ್ಷೆಯನ್ನು ಮುಂದೂಡಬೇಕು. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಬೆಳೆ ಹಾನಿಗೆ ಪರಿಹಾರ ನೀಡಲು ಹಣವಿಲ್ಲ. ಅನುದಾನ ವಿತರಣೆಯಲ್ಲೂ ತಾರತಮ್ಯವಾಗುತ್ತಿದೆ. ಪ್ರತಿ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಅನುದಾನ ನೀಡಿದರೆ ಮಾತ್ರ ಅದನ್ನು ಅಭಿವೃದ್ಧಿಯ ಪಥ ಎನ್ನಬಹುದು ಎಂದರು.ಮುಡಾ ಹಗರಣದ ಕುರಿತು ಮಾತನಾಡಿದ ಅವರು, ಇಡಿ ಮಾಜಿ ಮುಡಾ ಆಯುಕ್ತರನ್ನು ಬಂಧಿಸಿದೆ. ಮುಡಾ ಹಗರಣದಲ್ಲಿ ಕಳೆದುಕೊಂಡ ಎಲ್ಲ ಹಣ ವಾಪಸ್ ಬರಬೇಕು.ಇದನ್ನೂ ಓದಿ: ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನಾ ಸಮಾರಂಭ..!


ತಪ್ಪಿತಸ್ಥರೆಲ್ಲರ ಬಂಧನವಾಗಬೇಕು ಎಂಬುದು ಬಿಜೆಪಿಯ ಆಗ್ರಹ ಎಂದು ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಕುಲಗಳನ್ನು ರೂಪಿಸಿದ್ದಾರೆ. ಕನಕದಾಸರು “ಕುಲವೆಂದು ಹೊಡೆದಾಡಬೇಡಿ” ಎಂದಿದ್ದರೆ, ಸಿಎಂ ಸಿದ್ದರಾಮಯ್ಯ ಕುಲಗಳು ಹೊಡೆದಾಡುವಂತೆ ಮಾಡಿದ್ದಾರೆ. ಕ್ರೈಸ್ತರಲ್ಲೂ ಹಿಂದೂ ಜಾತಿಗಳನ್ನು ತಂದಿದ್ದಾರೆ. ಹಿಂದೆ ವೀರಶೈವ-ಲಿಂಗಾಯತರನ್ನು ಒಡೆದಿದ್ದರು. ಈಗ ಅದನ್ನೇ ಮಾಡಲು ಹೋದರೆ ಕಾಂಗ್ರೆಸ್ ಪಕ್ಷವೇ ಒಡೆದುಹೋಗುತ್ತದೆ ಎಂದು ವ್ಯಂಗ್ಯವಾಡಿದರು.MANOHARI Women's Trendy Banarasi Satin Silk Woven Saree with Heavy Jacquard Work, Elegant Design, flower Pattern Silk Saree with Unstitched Blouse Piece for Weddings & Festive Occasions