Skip to main content
ವಿಡಿಯೋ
1/2
crime

ಧರ್ಮಸ್ಥಳ ಪ್ರಕರಣದಲ್ಲಿ ಶಾಕಿಂಗ್ ಅಪ್‌ಡೇಟ್...ಬಂಗ್ಲೆಗುಡ್ಡ ಅರಣ್ಯದಲ್ಲಿ 5 ತಲೆಬುರುಡೆ ಜೊತೆ ನೂರಾರು ಮೂಳೆಗಳು ಪತ್ತೆ!

By Pavitra Ganapathi Baradavalli
ಧರ್ಮಸ್ಥಳ ಪ್ರಕರಣದಲ್ಲಿ ಶಾಕಿಂಗ್ ಅಪ್‌ಡೇಟ್...ಬಂಗ್ಲೆಗುಡ್ಡ ಅರಣ್ಯದಲ್ಲಿ 5 ತಲೆಬುರುಡೆ ಜೊತೆ ನೂರಾರು ಮೂಳೆಗಳು ಪತ್ತೆ!

ಧರ್ಮಸ್ಥಳದ ಬಂಗ್ಲೆಗುಡ್ಡೆ ಅರಣ್ಯದಲ್ಲಿ ಎಸ್‌ಐಟಿ ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯಲ್ಲಿ ಐದು ಮಾನವ ತಲೆಬುರುಡೆಗಳು ಮತ್ತು ನೂರಕ್ಕೂ ಹೆಚ್ಚು ಮೂಳೆಗಳು ಪತ್ತೆಯಾಗಿವೆ. ಹೈಕೋರ್ಟ್ ವಿಚಾರಣೆಗೆ ಮುನ್ನವೇ ಬಯಲಾದ ಈ ಭೀಕರ ಸಂಗತಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.

ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ಅರಣ್ಯದಲ್ಲಿ ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಸೌಜನ್ಯಾ ಮಾವ ವಿಠಲಗೌಡ ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಎಸ್‌ಐಟಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ.ಇದನ್ನೂ ಓದಿ: ಬೆಂಗಳೂರು ರಸ್ತೆ ಸುಧಾರಣೆಗೆ ಡಿಕೆಶಿಯ ಗುರಿ: ನವೆಂಬರ್‌ ಡೆಡ್‌ಲೈನ್‌ ಘೋಷಣೆ..!


ಬಂಗ್ಲೆಗುಡ್ಡೆ ರಹಸ್ಯವನ್ನು ಭೇದಿಸುವಂತೆ ಕೋರಿ ವಿಠಲಗೌಡ ಅವರ ಸಹೋದರ ಪುರಂದರಗೌಡ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸೆಪ್ಟೆಂಬರ್ 19ರಂದು ವಿಚಾರಣೆಗೆ ಬರಲಿದ್ದು, ಅದಕ್ಕೂ ಮುನ್ನವೇ ಎಸ್‌ಐಟಿ ತೀವ್ರ ಶೋಧ ನಡೆಸಿದೆ. ಶೋಧದ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆಯಿದೆ.ಇದನ್ನೂ ಓದಿ: ನರೇಂದ್ರ ಮೋದಿ ಆಗಮನದಿಂದ ಸ್ವಚ್ಛ ಆಡಳಿತ ಸ್ಥಾಪನೆ : ಆರ್‌. ಅಶೋಕ್‌ ಹೇಳಿಕೆ

ಬುಧವಾರ ನಡೆದ ಶೋಧ ಕಾರ್ಯದಲ್ಲಿ ಬಂಗ್ಲೆಗುಡ್ಡೆ ಪ್ರದೇಶದ ಐದು ವಿಭಿನ್ನ ಸ್ಥಳಗಳಲ್ಲಿ ಮಾನವ ಅಸ್ಥಿಪಂಜರದ ಅವಶೇಷಗಳು ದೊರೆತಿವೆ. ಒಟ್ಟು ಐದು ಮಾನವ ತಲೆಬುರುಡೆಗಳು ಹಾಗೂ ಸುಮಾರು 100 ಮೂಳೆಗಳನ್ನು ಸುಕೋ ತಂಡದ ಸಹಾಯದಿಂದ ಎಸ್‌ಐಟಿ ಸಂಗ್ರಹಿಸಿದೆ. ಎಸ್‌ಐಟಿ ಮೂರು ಪ್ರತ್ಯೇಕ ತಂಡಗಳಾಗಿ ದಿನಪೂರ್ತಿ ಕಾರ್ಯಾಚರಣೆ ನಡೆಸಿದ್ದು, ಗುರುವಾರವೂ ಶೋಧ ಮುಂದುವರಿಯಲಿದೆ.ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿಯಮ ಉಲ್ಲಂಘನೆಗೆ ಬಿದ್ದ ಫೈನ್‌ ರದ್ದು ಕೋರಿ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಗೃಹ ಸಚಿವರಿಗೆ ಪತ್ರ..!!

ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು ಭೂಮಿಯ ಮೇಲ್ಭಾಗದಲ್ಲೇ ಇದ್ದವು. ದೊರೆತ ಮೂಳೆಗಳು, ದೇಹದ ಭಾಗಗಳು, ಬಟ್ಟೆಗಳ ತುಂಡುಗಳು ಸೇರಿದಂತೆ ಅಂಗಿ, ಪ್ಯಾಂಟ್, ಸೀರೆ, ಊರುಗೋಲು, ಹಾಗೂ ಲೈಸೆನ್ಸ್ ಕೂಡ ಪತ್ತೆಯಾಗಿವೆ. ಇವುಗಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ.ಇದನ್ನೂ ಓದಿ: ಸಚಿವ ಶ್ರೀ ಸಂತೋಷ್ ಲಾಡ್‌ರಿಂದ ಕೂಡಗು ಪ್ರವಾಸ: ಕೊಡಗಿನ ಕಾಫಿ ಬೆಳೆಗಾರರು & ಹೋಂ ಸ್ಟೇ ನಿರ್ವಹಣಗಾರರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ


ಎಸ್‌ಐಟಿ ತನಿಖಾಧಿಕಾರಿ ಎಸ್ಪಿ ಜಿತೇಂದ್ರ ದಯಾಮ ಅವರ ನೇತೃತ್ವದಲ್ಲಿ ಸುಕೋ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮೆಟಲ್ ಡಿಟೆಕ್ಟರ್ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಶೋಧ ಆರಂಭಿಸಲಾಗಿದೆ. ಸುಮಾರು 12 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡೆ ಅರಣ್ಯದಲ್ಲಿ ಎಸ್‌ಐಟಿ ಸಂಪೂರ್ಣ ಶೋಧ ನಡೆಸಲು ಉದ್ದೇಶಿಸಿದೆ.MANOHARI Women's Trendy Banarasi Satin Silk Woven Saree with Heavy Jacquard Work, Elegant Design, flower Pattern Silk Saree with Unstitched Blouse Piece for Weddings & Festive Occasions