ಭಾರತದ ಅಥ್ಲೆಟಿಕ್ ಆಟಗಾರ, ನೀರಜ್ ಚೋಪ್ರಾ ಈ ಬಾರಿಯ ವಿಶ್ವ ಜಾವೆಲಿನ್ ಚಾಂಪಿಯನ್ಷಿಪ್ನಲ್ಲಿ ನೀರಸ ಪ್ರದರ್ಶನ ತೋರಿದ್ದಾರೆ. ಈ ವೇಳೆ, ಟೋಕಿಯೋದಲ್ಲಿ ಗುರುವಾರ ನಡೆದ ಫೈನಲ್ನ ಐದನೇ ಸುತ್ತಿನಲ್ಲಿ ಹೊರಗೂಳಿದು, ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಪ್ರಥಮ ಬಾರಿಗೆ ಅವರು ಅಗ್ರಸ್ಥಾನ- ಮೂರರಿಂದ ಕೆಳಗಿಳಿದಿದ್ದಾರೆ ಇದಕ್ಕೆ ಅವರ ಫಿಟ್ನೆಸ್ ಹಾಗೂ ಅನಾರೋಗ್ಯ ಕಾರಣ ಅನಿರೀಕ್ಷಿತ ಪದಕದಿಂದ ವಂಚಿತರಾದರು ಎನ್ನಲಾಗಿದೆ. 2018 ರಿಂದಲೂ ಎಲ್ಲಾ ಕೂಟಗಳ ಸ್ಪರ್ಧೆಗಳಲ್ಲಿ ಅವರಿಗೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಿತ್ತು. ತಮ್ಮ ಉತ್ತಮ ಪ್ರದರ್ಶನದಿಂದ ಕಾಮನ್ವೆಲ್ತ್, ವಿಶ್ವಚಾಂಪಿಯನ್