Skip to main content
ವಿಡಿಯೋ
1/3
sports

ಐಸಿಸಿ ಟಿ20 ವಿಶ್ವಕಪ್‌ 2026 - ಭಾರತ - ಪಾಕ್‌ ಹೈವೋಲ್ಟೇಜ್‌ ಪಂದ್ಯ ಫೆಬ್ರವರಿ 15 ಕ್ಕೆ!?

By Shravanthi R
ಐಸಿಸಿ ಟಿ20 ವಿಶ್ವಕಪ್‌ 2026 - ಭಾರತ - ಪಾಕ್‌ ಹೈವೋಲ್ಟೇಜ್‌ ಪಂದ್ಯ ಫೆಬ್ರವರಿ 15 ಕ್ಕೆ!?

ಮುಂದಿನ ವರ್ಷ ಫೆಬ್ರವರಿ 15 ಕ್ಕೆ ಬದ್ದವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವೆ ವಿಶ್ವಕಪ್‌ ಫೈಟ್‌ ನಡೆಯಲಿದೆ ಎಂದು ಮಾಹಿತಿ ತಿಳಿಸಲಾಗಿದೆ.

ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಫೆಬ್ರವರಿ  7 ರಿಂದ ಆರಂಭಗೊಂಡು ಮಾರ್ಚ್‌ 8 ರವರೆಗೆ ನಡೆಯಲಿದೆ ಎಂದು ಮೂಲ ಮಾಹಿತಿಗಳ ಪ್ರಕಾರ, ತಿಳಿಸಲಾಗಿದೆ. ಈ ಮಧ್ಯೆ ಭಾರತ ಮತ್ತು ಪಾಕ್‌ ನಡುವಿನ ಹಣಾಹಣಿಯು ಫೆ.15 ರಂದು ಕೊಲೊಂಬೋದಲ್ಲಿ ನಡೆಯಲಿದೆ ಎನ್ನಲಾಗಿದೆ.

ಫೆಬ್ರವರಿ  8 ರಿಂದ ಭಾರತವು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯುಎಸ್ಎ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ, ಅನಂತರ ಫೆಬ್ರವರಿ 12 ರಂದು ದೆಹಲಿಯಲ್ಲಿ ನಮೀಬಿಯಾ ವಿರುದ್ಧದ ಪಂದ್ಯವನ್ನು ಆಡಲಿದೆ. OPPO K13x 5G 6000mAh and 45W SUPERVOOC Charger & AI (Midnight Violet, 128 GB) (4 GB RAM) 

ಒಟ್ಟು 20 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಎರಡೂ ದೇಶಗಳ 7 ಸ್ಥಳಗಳಲ್ಲಿ ಕ್ರಿಕೆಟ್‌ ಸೆಣಸಾಟ ನಡೆಯಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೆಹಲಿ ವಾಯುಮಲಿನ - ವಾಸ್ತವ ತಂದ ಒತ್ತಡ - ಪ್ರವಾಸವನ್ನು ಅರ್ಧಕ್ಕೇ ಕೈಬಿಟ್ಟ ಉದ್ಯಮಿ ಯಾರು ಗೊತ್ತಾ!?