Skip to main content
ವಿಡಿಯೋ
1/3
cinema

'ಕಾಂತಾರ ಚಾಪ್ಟರ್ 1' ಟ್ರೇಲರ್‌ನಲ್ಲಿ ಹಾಸ್ಯನಟ ದಿ..ರಾಕೇಶ್ ಶೆಟ್ಟಿ...ಯಾವ ಪಾತ್ರದಲ್ಲಿ ಕಾಣಿಸಿಕೊಂಡ್ರು ಗೊತ್ತಾ?

By Ram Chethan
'ಕಾಂತಾರ ಚಾಪ್ಟರ್ 1' ಟ್ರೇಲರ್‌ನಲ್ಲಿ ಹಾಸ್ಯನಟ ದಿ..ರಾಕೇಶ್ ಶೆಟ್ಟಿ...ಯಾವ ಪಾತ್ರದಲ್ಲಿ ಕಾಣಿಸಿಕೊಂಡ್ರು ಗೊತ್ತಾ?

ಟ್ರೈಲರ್‌ನಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡ ದಿವಂಗತ ರಾಕೇಶ್ ಶೆಟ್ಟಿ ಅವರನ್ನು ಕಂಡು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಶೂಟಿಂಗ್ ಮುಗಿಸಿದ ಕೆಲವೇ ದಿನಗಳಲ್ಲಿ ನಿಧನರಾದ ಅವರ ಸ್ಮರಣೆ ಪ್ರೇಕ್ಷಕರ ಹೃದಯ ಮುಟ್ಟಿದೆ.

ಸೆಪ್ಟೆಂಬರ್ 22, 2025 ರಂದು ಪ್ರಕಟಗೊಂಡ ಸುದ್ದಿ ಪ್ರಕಾರ, ‘ಕಾಂತಾರ ಚಾಪ್ಟರ್ 1’ ಸಿನಿಮಾದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಅದರಲ್ಲಿ ಕಾಣಿಸಿಕೊಂಡಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವಂಗತ ರಾಕೇಶ್ ಶೆಟ್ಟಿ ಅವರನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.

ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರ ಅಭಿನಯ ಸೇರಿದಂತೆ ಟ್ರೈಲರ್‌ನ ಪ್ರತಿಯೊಂದು ಅಂಶವನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದರ ನಡುವೆ, ಟ್ರೈಲರ್‌ನ ಒಂದು ದೃಶ್ಯ ಕನ್ನಡಿಗರ ಮನಸ್ಸು ಕಲುಕಿದೆ. ಅದೇನೆಂದರೆ, ರಾಕೇಶ್ ಶೆಟ್ಟಿ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿರುವುದು.U.S. POLO ASSN. Men's Cotton Tailored Fit Solid Oxford Button Down Casual Shirt

ಸಿನಿಮಾ ಬಿಡುಗಡೆಗೂ ಮುನ್ನವೇ ರಾಕೇಶ್ ನಿಧನರಾಗಿದ್ದು, ತಾವು ಆಸೆಯಿಂದ ಅಭಿನಯಿಸಿದ ಚಿತ್ರವನ್ನು ನೋಡುವ ಭಾಗ್ಯ ಅವರಿಗೆ ಇಲ್ಲವಾಯಿತಲ್ಲ ಎಂದು ಅಭಿಮಾನಿಗಳು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಟ್ರೈಲರ್‌ನಲ್ಲಿ ರಾಕೇಶ್ ಶೆಟ್ಟಿ ಸೈನಿಕನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವೇಷಭೂಷಣ ಮತ್ತು ಮೇಕಪ್ ಅವರನ್ನು ವಿಭಿನ್ನವಾಗಿ ತೋರಿಸಿದೆ.

ರಿಷಬ್ ಶೆಟ್ಟಿ ಸೆರೆಮನೆಯಲ್ಲಿರುವ ದೃಶ್ಯದ ನಂತರ ರಾಕೇಶ್ ಕಾಣಿಸಿಕೊಳ್ಳುತ್ತಾರೆ. 'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ರಾಕೇಶ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅವರ ನಿಧನದ ಸುದ್ದಿ ಚಿತ್ರತಂಡಕ್ಕೆ ದೊಡ್ಡ ಆಘಾತ ನೀಡಿತ್ತು. ಮೇ 11 ರಂದು ‘ಕಾಂತಾರ: ಚಾಪ್ಟರ್ 1’ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ರಾಕೇಶ್, ಅದೇ ರಾತ್ರಿ ಹೃದಯಾಘಾತದಿಂದ ನಿಧನರಾದರು.ನಿಮ್ಮನ್ನು ನೋಡೋದಕ್ಕೆ ನಾವು ಬರಬಾರದಾ? ಅಬ್ಬಾ ಹೇಗಿದೆ ಗೊತ್ತಾ ‘ಕಾಂತಾರ ಚಾಪ್ಟರ್ 1’ ಚಿತ್ರದ ಟ್ರೈಲರ್

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೂಲಕ ಜನರನ್ನು ನಗಿಸುತ್ತಿದ್ದ ರಾಕೇಶ್ ಪೂಜಾರಿ ಅವರ ಅಕಾಲಿಕ ಮರಣದ ಸುದ್ದಿ ಕೇಳಿ ಚಿತ್ರರಂಗವೇ ಬೆಚ್ಚಿಬಿದ್ದಿತ್ತು. ಆರೋಗ್ಯವಾಗಿದ್ದ ರಾಕೇಶ್ ಚಿಕ್ಕ ವಯಸ್ಸಿನಲ್ಲೇ ನಿಧನರಾಗಿದ್ದು, ಅಭಿಮಾನಿಗಳಿಗೆ ಆಘಾತ ತಂದಿತ್ತು.

ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಸೀಸನ್ 3 ವಿಜೇತರಾಗಿದ್ದ ರಾಕೇಶ್ ಪೂಜಾರಿ, ಈ ಮೂಲಕ ಜನಪ್ರಿಯರಾಗಿದ್ದರು. ನಂತರ ಅವರಿಗೆ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಹರಿದು ಬಂದವು. ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು, ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.

ಮೇ 11 ರಂದು ರಾಕೇಶ್, ಮಿಯ್ಯಾರಿನಲ್ಲಿ ತಮ್ಮ ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಖುಷಿಯಿಂದ ನೃತ್ಯ ಮಾಡುತ್ತಾ ಸಮಯ ಕಳೆದಿದ್ದರು. ನೃತ್ಯ ಮಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದ ರಾಕೇಶ್ ಅವರನ್ನು ತಕ್ಷಣ ಕಾರ್ಕಳದ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ರ್‍ಯಾಲಿಯಲ್ಲಿ ಇದ್ದವ್ರೆಲ್ಲ ವೋಟ್ ಹಾಕಲ್ಲ ಹುಷಾರ್...ವಿಜಯ್‌ಗೆ ಟಾಂಗ್ ಕೊಟ್ರಾ ಕಮಲ್ ಹಾಸನ್?

ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಅವರ ಸ್ನೇಹಿತರು ತಿಳಿಸಿದ್ದರು. ಮೂಲಗಳ ಪ್ರಕಾರ, ರಾಕೇಶ್ ಪೂಜಾರಿ ಅವರಿಗೆ ಲೋ ಬಿಪಿ ಆಗಿದ್ದು, ನಂತರ ಹೃದಯಾಘಾತದಿಂದ ನಿಧನರಾಗಿದ್ದಾರೆ.