ಇಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಜಾತಿ ಗಣತಿ ಸಂಬಂಧಿತ ಪಿಐಎಲ್ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ವಾದ - ವಿವಾದಗಳನ್ನು ಆಲಿಸಿದ ನ್ಯಾಯಪೀಠವು, ವಿಚಾರಣೆಯನ್ನು ಸೆ. 24 (ಬುಧವಾರ) ಮುಂದೂಡಿಕೆ ಮಾಡಿದೆ ಎಂದು ತಿಳಿಸಲಾಗಿದೆ. ಕರ್ನಾಟಕದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ದತ್ತಾಂಶದ ಕುರಿತು ಇಂದು ಅರ್ಜಿ ವಿಚಾರಣೆ ಜರುಗಿತು.ಹಿಂದುಳಿದ ವರ್ಗದ ಆಯೋಗವನ್ನು ಪ್ರಶ್ನೆ ಮಾಡಿದ ಕರ್ನಾಟಕ ಹೈಕೋರ್ಟ್, ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಅರ್ಜಿ ಸಲ್ಲಿಸಿದವರ ಪರ ವಕೀಲರ ವಾದವನ್ನು ಆಲಿಸಿತು. ತದನಂತರ, ಗಣತಿಯ ವಿವಿಧ ಆಯಾಮಗಳ ಬಗ್ಗೆ ತೀವ್ರ ಚರ್ಚೆ ನಡೆಸಲಾಯಿತು. ಈ ಮಧ್ಯೆ ಮುಖ್ಯ