ಗದಗ: ಬಾಲಕಿ ಮೇಲೆ ಬೀದಿ ನಾಯಿಗಳು ಅಟ್ಟಹಾಸ ಮೆರೆದಿದೆ. ನಾಯಿ ಡೆಡ್ಲಿ ಅಟ್ಯಾಕ್‌ಗೆ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ. ನಾಯಿಗಳು ಅಟ್ಯಾಕ್ ಮಾಡುತ್ತಿದ್ದಂತೆ 7ವರ್ಷದ ಬಾಲಕಿ ತೀವ್ರವಾಗಿ ನರಳಾಟ ನಡೆಸುತ್ತಿದ್ದಾಳೆ.ಗದಗ ಬಸ್ ನಿಲ್ದಾಣದ ಹಿಂಭಾಗ ಈ ಘಟನೆ ನಡೆದಿದೆ. ಶಾಲೆಗೆ ಹೋಗಿ ಪುನಃ ಆಟೋದಿಂದ ಬಂದು ಇಳಿದು ಮನೆಗೆ ಹೋಗೋ ಸಂದರ್ಭದಲ್ಲಿ ನಾಯಿಗಳು ಏಕಾಏಕಿ ಅಟ್ಯಾಕ್ ನಡೆಸಿದೆ.ಇದನ್ನೂ ಓದಿ: ನಡುರಸ್ತೆಯಲ್ಲಿ ಮಹಿಳೆಗೆ ಕಾಲಿನಿಂದ ಒದ್ದ ಅಂಗಡಿ ಮಾಲೀಕ: ಸೀರೆ ಕಳ್ಳತನ ಆರೋಪದಲ್ಲಿ ದೌರ್ಜನ್ಯ..!
ಬಾಲಕಿ ಹೆಸರು ಶ್ರೇಯಾ ಎಂದು ತಿಳಿದುಬಂದಿದೆ. ಒಟ್ಟು 7 ಬೀದಿನಾಯಿಗಳು ಬಾಲಕಿ ಮೇಲೆ ಏಕಾಏಕಿ ಅಟ್ಯಾಕ್ ನಡೆಸಿವೆ. ತಲೆ, ಕೈ, ಕಾಲು, ಕಣ್ಣು, ಮುಖಕ್ಕೆ ಬಾಯಿಗೆ ಸಿಕ್ಕ ಹಾಗೇ ಕಚ್ಚಿ ಗಾಯಗೊಳಿಸಿದೆ. ನಾಯಿಯ ದಾಳಿಯಿಂದ ರೋಡ್‌ನಲ್ಲೇ ಬಿದ್ದು ಒದ್ದಾಡಿದ್ದಾಳೆ. ಸದ್ಯ ಬಾಲಕಿಯನ್ನು ಹುಬ್ಬಳ್ಳಿಯ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕನಿಗೆ ಅಂತಿಮ ನುಡಿ ನಮನ..!!
ಈಗ ಎಲ್ಲಿ ನೋಡಿದರೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಈ ಬೀದಿ ನಾಯಿಗಳು ಅಸಹಾಯಕರು ಮಕ್ಕಳ ಮೇಲೆಯೇ ಈ ನಾಯಿಗಳ ದಾಳಿ ಹೆಚ್ಚಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕನ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಸರಿಯಾಗಿ ಆಟೋ ಚಾಲಕ ಮನೆಯ ಮುಂದೆ ಬಿಟ್ಟು ಹೋಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಪದೇ ಪದೇ ಈ ಬೀದಿಗಳ ಹಾವಳಿಗೆ ಮಕ್ಕಳೇ ಬಲಿಯಾಗುತ್ತಿರುವುದು ವಿಷಾದನೀಯವಾಗಿದೆ.C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)