Skip to main content
ವಿಡಿಯೋ
1/2
crime

ಮಾದಪ್ಪನ ಬೆಟ್ಟದಲ್ಲಿ ಅರ್ಧ ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆ..!!!

By Pavitra Ganapathi Baradavalli
ಮಾದಪ್ಪನ ಬೆಟ್ಟದಲ್ಲಿ ಅರ್ಧ ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆ..!!!

ಮಾದಪ್ಪನ ಬೆಟ್ಟದಲ್ಲಿ ಹುಲಿಯ ಅರ್ಧ ಕಳೇಬರ ಪತ್ತೆಯಾಗಿದೆ. ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ಅರ್ಧ ಕಳೇಬರ ಮಾತ್ರ ಪತ್ತೆಯಾಗಿದೆ. ಹುಲಿಯ ಕಳೆಬರವನ್ನು ಮಣ್ಣಿನಲ್ಲಿ ಹುದುಗಿಸಿಟ್ಟಿದ್ದ ರೀತಿಯಲ್ಲಿ ಹುಲಿಯ ಅರ್ಧ ಕೊಳೆತ ಸ್ಥಿತಿಯಲ್ಲಿ ಕಳೇಬರ ಪತ್ತೆಯಾಗಿದೆ.

ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ಹುಲಿಯ ಅರ್ಧ ಕಳೇಬರ ಪತ್ತೆಯಾಗಿದೆ. ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ಅರ್ಧ ಕಳೇಬರ ಮಾತ್ರ ಪತ್ತೆಯಾಗಿದೆ. ಹುಲಿಯ ಕಳೆಬರವನ್ನು ಮಣ್ಣಿನಲ್ಲಿ ಹುದುಗಿಸಿಟ್ಟಿದ್ದ ರೀತಿಯಲ್ಲಿ ಹುಲಿಯ ಅರ್ಧ ಕೊಳೆತ ಸ್ಥಿತಿಯಲ್ಲಿ ಕಳೇಬರ ಪತ್ತೆಯಾಗಿದೆ. ಹುಲಿಯ ತಲೆ ಭುಜ ಮತ್ತು ಮುಂಗಾಲುಗಳು ಮಾತ್ರ ಪತ್ತೆಯಾಗಿದೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡಿಜೆಗೆ ಅವಕಾಶ ಕೊಡಲಿಲ್ಲ ಎಂದು ಸ್ಥಳೀಯರ ಆಕ್ರೋಶ…!!


ಹುಲಿಯ ಉಳಿದ ಭಾಗಗಳಿಗಾಗಿ ಈಗಾಗಲೇ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಹುಲಿಯನ್ನು ಬೇಕಂತಲೇ ಯಾರಾದರೂ ಭೇಟೆ ಆಡಿ ಹುಲಿಯ ಅರ್ಧ ಕಳೇಬರವನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಅನುಮಾನವನ್ನ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಇಸಿಎಂಎಸ್ ಯೋಜನೆಯಿಂದ 1.41 ಲಕ್ಷ ಉದ್ಯೋಗ ನಿರೀಕ್ಷೆ, 10 ಲಕ್ಷ ಕೋಟಿ ಉತ್ಪಾದನೆ ಗುರಿ

ಮೊದಲೇ ನಮ್ಮಲ್ಲಿ ಹುಲಿ ಸಂಪತ್ತು ಕಡಿಮೆ ಇದೆ ಅದರಲ್ಲೂ ದುರುಳರು ತಮ್ಮದೇ ವೈಯಕ್ತಿಕ ಹಿತಾಸಕ್ತಿಯಿಂದ ಹುಲಿಗಳನ್ನು ನಾಶ ಮಾಡುತ್ತಾ ಹೋದರೆ ಏನು ಗತಿ ಎಂಬ ಕಳವಳವನ್ನು ಅರಣ್ಯ ಅಧಿಕಾರಿಗಳು ವ್ಯಕ್ತ ಪಡಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸಮತೋಲನದಲ್ಲಿರಿಸಲು ಎಲ್ಲಾ ಪ್ರಾಣಿಗಳು ಅವಶ್ಯಕ ಅದಕ್ಕಾಗಿಯೇ ಬೇಟೆಯಾಡುವುದನ್ನು ನಿರ್ಬಂಧಿಸಿತ್ತು ಸರ್ಕಾರ ಆದರೆ ಅದನ್ನೂ ಮೀರಿ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಆದರೆ ಇಂತಹ ಕೃತ್ಯ ಎಸಗಿದವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ: ಕೋಲಾರದಲ್ಲಿ ನಕಲಿ ವೈದ್ಯರ ಹಾವಳಿಗೆ 8 ವರ್ಷದ ಬಾಲಕಿ ಸಾ*ವು..


ಹುಲಿ ನಿಗೂಢ ಸಾವಿನ ತನಿಖೆಗೆ ಈಶ್ವರ್‌ ಖಂಡ್ರೆ ಸಹ ಆದೇಶ ಮಾಡಿದ್ದಾರೆ. ಪಿಸಿಸಿಎಫ್‌ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಇನ್ನೂ 8 ದಿನಗಳಲ್ಲಿ ತನಿಖೆಯ ವರದಿಯನ್ನು ಸಲ್ಲಿಸುವಂತೆ ಸೂಚನೆಯನ್ನು ನೀಡಲಾಗಿದೆ. ಹುಲಿ ಹಂತಕರನ್ನು ಪತ್ತೆ ಮಾಡುವಂತೆ ಅರಣ್ಯ ಸಚಿವ ಸೂಚನೆ ನೀಡಿದ್ದಾರೆ.
SWORNOF Women's Patola Silk Saree With Unstitched Boluse Piece