ಕಲಬುರಗಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಶಾಲಾ-ಕಾಲೇಜು ಮೈದಾನಗಳು, ಸಾರ್ವಜನಿಕ ಪಾರ್ಕ್‌ಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಕಾನೂನು ರೂಪಿಸುವಂತೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಗಾಜಾ ಯುದ್ಧ ಅಂತ್ಯ ಎಂದು ಘೋಷಿಸಿದ ಟ್ರಂಪ್: ಇಸ್ರೇಲ್‌ಗೆ ಭೇಟಿ ಮೊದಲು ಮಹತ್ವದ ಘೋಷಣೆ!
ಆದರೆ, ಪ್ರಿಯಾಂಕ್ ಖರ್ಗೆ ಅವರ ಈ ಪತ್ರಕ್ಕೆ ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ.ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಅವರ ಅನುದಾನಿತ ಶಾಲೆಯಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆದಿದೆ. ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಶಾಸಕರ ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ನಿನ್ನೆ ಸಂಜೆ ಆರ್‌ಎಸ್‌ಎಸ್‌ನ ಆಕರ್ಷಕ ಪಥಸಂಚಲನ ನಡೆಯಿತು.ಇದನ್ನೂ ಓದಿ: ಬಿಜೆಪಿಯ ಕೋರ್ ಕಮಿಟಿ ಅಲರ್ಟ್ ಮೋಡ್‌ನಲ್ಲಿ: ಕಾಂಗ್ರೆಸ್‌ನ ‘ನವೆಂಬರ್ ಕ್ರಾಂತಿ’ ಮೇಲೆ ಹದ್ದಿನ ಕಣ್ಣು!
ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದರು. ಬಳಿಕ ಶಾಲಾ ಆವರಣದಲ್ಲಿಯೇ ಬೌದ್ಧಿಕ ಕಾರ್ಯಕ್ರಮವೂ ನಡೆದಿದೆ. ಇದು ವಿಪಕ್ಷಗಳಿಗೆ ಟೀಕೆಗೆ ಗ್ರಾಸವಾಗಿದೆ.ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿಯು ಪ್ರಿಯಾಂಕ್ ಖರ್ಗೆ ಅವರ ಪತ್ರದ ಪರಿಣಾಮಗಳನ್ನು ಗಮನಿಸಲು ಭಾನುವಾರದ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸಂಪುಟದಲ್ಲಿ ಬದಲಾವಣೆಯ ಪರ್ವ? ರಾಜೀನಾಮೆ ಗುಸುಗುಸು ಸತ್ಯವೇ?
ಪತ್ರದ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಎಮ್‌ಎಲ್‌ಸಿಗಳಾದ ಎನ್. ರವಿಕುಮಾರ್ ಮತ್ತು ಕೆ.ಎಸ್. ನವೀನ್ ಅವರನ್ನೊಳಗೊಂಡ ಈ ಸಮಿತಿಯು ಆರ್‌ಎಸ್‌ಎಸ್ ಚಟುವಟಿಕೆಗಳ ನಿಷೇಧ ಪ್ರಸ್ತಾಪದ ಸಾಧಕ-ಬಾಧಕಗಳನ್ನು ವಿಶ್ಲೇಷಿಸಲಿದೆ. ಸರ್ಕಾರದ ಮುಂದಿನ ಕ್ರಮಗಳ ಮೇಲೆ ಈ ಸಮಿತಿ ನಿರಂತರ ನಿಗಾ ಇಡಲಿದ್ದು, ನಿಷೇಧದ ತೀರ್ಮಾನವಾದರೆ ಅದರಿಂದ ಉಂಟಾಗುವ ಪರಿಣಾಮಗಳನ್ನು ಅಧ್ಯಯನ ಮಾಡಲಿದೆ.SWORNOF Women's kanjivaram banarasi silk saree for festival Wedding silk with rich pallu Design sarees for women with Unstitched blouse piece