ತಾವು ಬುಕ್ ಮಾಡಿದ್ದ ಆಟೋವನ್ನು ರದ್ದುಪಡಿಸಿದ್ದಕ್ಕೆ ಯುವತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆಟೋ ಚಾಲಕ ಪವನ್ (21) ಎಂಬಾತನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬೇರೆ ರಾಜ್ಯದ ಯುವತಿ ಅಕ್ಟೋಬರ್ 2ರಂದು ಉಬರ್‌ನಲ್ಲಿ ಆಟೋ ಬುಕ್ ಮಾಡಿದ್ದರು. ಆಟೋ ಬಾರದೆ ತಡವಾಗಿದ್ದರಿಂದ ಬೇರೆ ಆಟೋದಲ್ಲಿ ತೆರಳಿದ್ದರು. ಆ ಬಳಿಕ ಆಟೋ ಚಾಲಕ ಪವನ್ ಹಿಂದಿಕ್ಕಿ ಬಂದು, ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.ಇದನ್ನೂ ಓದಿ: Vikasit Bharat Buildathon 2025: ರಾಷ್ಟ್ರ ನಿರ್ಮಾಣಕ್ಕಾಗಿ ದೇಶದ ಯುವ ಮನಸ್ಸುಗಳಿಗೆ ನಾವೀನ್ಯತೆಯ ಆಹ್ವಾನ!
ಈ ಘಟನೆ ಬಗ್ಗೆ ಯುವತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಪೊಲೀಸರು, ಯುವತಿಯನ್ನು ಸಂಪರ್ಕಿಸಿ ದೂರು ನೀಡುವಂತೆ ಸೂಚಿಸಿದ್ದರು. ಅದರಂತೆ, ಕೊತ್ತನೂರು ಠಾಣೆಯಲ್ಲಿ ದೂರು ದಾಖಲಾದ ನಂತರ ಪೊಲೀಸರು ಆಟೋ ಚಾಲಕ ಪವನ್‌ನನ್ನು ಬಂಧಿಸಿದ್ದಾರೆ.
ದೂರಿನಲ್ಲಿ ಯುವತಿ ಘಟನೆಯನ್ನು ವಿವರಿಸಿದ್ದಾರೆ.ಇದನ್ನೂ ಓದಿ: ಕಲಬುರಗಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿವಾದ: ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಕಾಂಗ್ರೆಸ್ ಶಾಸಕರಿಂದಲೇ ಕೌಂಟರ್..!! ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ
ಅಕ್ಟೋಬರ್ 2ರಂದು ಕ್ಯಾಲಸೇನಹಳ್ಳಿಯಿಂದ ಬಾಣಸವಾಡಿಗೆ ಹೋಗಲು ಉಬರ್‌ನಲ್ಲಿ ಆಟೋ ಬುಕ್ ಮಾಡಿದ್ದೆ. ಆಟೋ ಚಾಲಕ ನಾನು ಬಂದೆ ಎಂದು ಸಂದೇಶ ಕಳುಹಿಸಿದರೂ, ಎಷ್ಟು ಸಮಯ ಕಾಯ್ದರೂ ಆಟೋ ಬರಲಿಲ್ಲ. ರಾತ್ರಿ ಸಮಯವಾಗಿದ್ದರಿಂದ ನನಗೆ ಭಯವಾಯಿತು. ಹಾಗಾಗಿ, ಆ ಬುಕ್ಕಿಂಗ್ ರದ್ದುಪಡಿಸಿ ಬೇರೆ ಆಟೋ ಬುಕ್ ಮಾಡಿ ಹೊರಟೆ. ನಾನು ಹೊರಟು ನಿಂತ ನಂತರವೂ ಆ ಮೊದಲಿನ ಆಟೋ ಚಾಲಕ ಅಲ್ಲಿಗೆ ಬಂದಿರಲಿಲ್ಲ. ಅಷ್ಟು ಹೊತ್ತು ಕಾಯುವ ತಾಳ್ಮೆ ನನಗಿರಲಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ಶಿವಮೊಗ್ಗ ಜಿಲ್ಲಾ ಸಹಕಾರಿ ಯೂನಿಯನ್ ಚುನಾವಣೆಯಲ್ಲಿ ಗೆದ್ದು ಬೀಗಿದ JDS ಅಭ್ಯರ್ಥಿ ನರಸಿಂಹ ಗಂಧದಮನೆ: ನಗರ ಜೆಡಿಎಸ್ ಅಧ್ಯಕ್ಷ ಶ್ರೀ ದೀಪಕ್ ಸಿಂಗ್‌ರ ಶ್ರಮಕ್ಕೆ ಹಿಡಿದ ಗೆಲುವಿನ ಕನ್ನಡಿ
ನಂತರ, ಯುವತಿ ಪ್ರಯಾಣಿಸುತ್ತಿದ್ದ ಆಟೋವನ್ನು ಹಿಂದಿಕ್ಕಿ ಬಂದ ಪವನ್, ದಾರಿಯಲ್ಲಿ ಅಡ್ಡಗಟ್ಟಿ, ಆಟೋ ಏಕೆ ರದ್ದು ಮಾಡಿದಿರಿ? ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಲ್ಲೆಗೆ ಮುಂದಾದಾಗ ಯುವತಿ ವಿಡಿಯೋ ಮಾಡಲು ಶುರು ಮಾಡಿದ ನಂತರ ಆತ ಹಲ್ಲೆಯನ್ನು ನಿಲ್ಲಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.SWORNOF Women's kanjivaram banarasi silk saree for festival Wedding silk with rich pallu Design sarees for women with Unstitched blouse piece