ಫೇಸ್‌ಬುಕ್ ಸಂಸ್ಥಾಪಿಸಿ ಮಾರ್ಕ್ ಜುಗರ್ಕರ್ ದಾಖಲೆ ಬರೆದಿದ್ದು ಗೊತ್ತೇ ಇದೆ. ಈ ನಿದರ್ಶನವನ್ನು ಹಿಂದಿಕ್ಕಿರುವ ಈ ಯುವಕನ ಸಾಧನೆಯು ಹದಿ ಹರೆಯದವರಿಗೆ ಅತಿದೊಡ್ಡ ಮಾದರಿ. ಇವರು ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸಿದರೂ, ಶತಕೋಟಿ ಗಳಿಸಿದ ಸರದಾರರಾಗಿ ಹೊರಹೊಮ್ಮಿದ್ದಾರೆ ಎನ್ನಲಾಗಿದೆ. ಹುಟ್ಟಿ ಬೆಳೆದಿದ್ದು ಅಮೆರಿಕಾದಲ್ಲಾದರೂ, ಇವರ ಪೋಷಕರು ಕನ್ನಡಿಗರು. ಶಾಲಾ ಗೆಳೆಯರಾದ ಸೂರ್ಯ ಮಿಧಾ, ಬ್ರೆಂಡಿನ್ ಫೂಡಿ ಹಾಗೂ ಆದರ್ಶ್ ಹಿರೇಮಠ್ ಜೊತೆಗೂಡಿ ಅಮೆರಿಕಾದ ಎಐ ಸೇವಾ ಸ್ಟಾರ್ಟ್‌ಅಪ್ ಮರ್ಕರ್ ಕಂಪನಿಯನ್ನು ಹುಟ್ಟುಹಾಕಿದ್ದಾರೆ. 2023 ರಲ್ಲಿ ಶುರುವಾದ ಈ ಕಂಪನಿಯು ಆರಂಭಗೊಂಡು 9 ತಿಂಗಳಲ್ಲೇ ಕೋಟಿ ಕೋಟಿ ಆದಾ