.png_2025-07-15T11%3A40%3A31.233Z&w=256&q=75)
“ಸೀತಾ- ಶಂಕರ” ಪ್ರೇಮಕಥೆ: ಇದು 90ರ ದಶಕದ ಪ್ರೀತಿ..!. ಭಾಗ-7
ಇನ್ನು ಶಂಕರನ ಮನೆಯಲ್ಲಿಯೂ ಹೆಣ್ಣಿನ ಮನೆಯವರು ಬರುತ್ತಿದ್ದಾರೆ ಎಂದು ಬೇಕಾದ ಪದಾರ್ಥಗಳನ್ನು ಮಾಡಿಕೊಳ್ಳುತ್ತಾರೆ, ನಂತರ ಆ ದೊಡ್ಡ ಮನೆಯ ಮೂಲೆಯಲ್ಲಿದ್ದ ಶಲಬೆ, ಕಸವನ್ನೆಲ್ಲಾ ಗುಡಿಸಿ ನೆಲವನ್ನೆಲ್ಲ ನೀಟಾಗಿ ತೊಳೆದು, ಮನೆಯ ಮುಂದಿನ ಹುಲ್ಲನ್ನೆಲ್ಲಾ ಕೆತ್ತಿ ಕ್ಲೀನ್ ಮಾಡಿಸುತ್ತಾರೆ ಗುಂಡಪ್ಪ ಮೇಷ್ಟ್ರು, ನಂತರ ಗುಂಡಪ್ಪನವರು ಲೋ ಶಂಕರ ಹೆಣ್ಣಿನ ಮನೆಯವರು ಬರ್ತಾ ಇದ್ದಾರೆ ಕಟಿಂಗ್ ಶಾಪಿಗೆ ಹೋಗಿ ಕಟಿಂಗ್ ಮಾಡಿಸಿಕೊಂಡು ಬಾ ಅಂತಾರೆ,