ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅಂದರೆ, ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ. ನಮ್ಮ ಆಯ್ಕೆಯಿಂದ ನಮ್ಮೆಲ್ಲರ ಉದ್ದಾರ ಎನ್ನುವಂತೆ, ನಾವು ಮತದಾನ ಮಾಡಿ ಆಯ್ಕೆ ಮಾಡುವ ನಾಯಕರು ನಮ್ಮ ಶ್ರೇಯೋಭಿವೃದ್ದಿಗೆ ಕಾರಣರಾಗಲಿದ್ದೇವೆ. ಹೀಗಾಗಿ, ಮತದಾನಕ್ಕೂ ಮೊದಲು, ನಾವು ಅರ್ಥಮಾಡಿಕೊಳ್ಳಲೇ ಬೇಕಿರುವ ಕೆಲವೊಂದು ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ. ಚುನಾವಣೆ ಎಂದರೆ ಕೇವಲ ಮತಪ್ರಚಾರವಲ್ಲ. ಆಡಳಿತ ಪ್ರಕ್ರಿಯೆಯೂ ಅಲ್ಲ. ಜನರ ಏಳ್ಗೆಗಾಗಿ, ದೇಶದ ಸಾಮಾಜಿಕ ಅಭಿವೃದ್ದಿಗಾಗಿ ಶ್ರಮಿಸುವ ವ್ಯವಸ್ಥಿತ ಸರ್ಕಾರದ ಮಾದರಿಯಾಗಿ ಚುನಾವಣೆ ಪ್ರಮುಖವಾಗಲಿದೆ. OnePlus 13 | Smarter