2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರೋಕ್ಷ ತೆರಿಗೆ (Indirect Taxes) ಮತ್ತು ಕಸ್ಟಮ್ಸ್ ಸುಂಕಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ಬದಲಾವಣೆಗಳನ್ನು ಘೋಷಿಸಿದ್ದಾರೆ.
ಪ್ರಮುಖ ಪರೋಕ್ಷ ತೆರಿಗೆಗಳು:
1. ಕಸ್ಟಮ್ಸ್ ಟ್ಯಾರಿಫ್ ರಚನೆಯ ಸರಳೀಕರ:
ಕೈಗಾರಿಕಾ ಸರಕುಗಳ ಆಮದು ಮತ್ತು ರಫ್ತು ಪ್ರಕ್ರಿಯೆಯನ್ನು ಸುಗಮಗೊಳಿಸಲು ಸರ್ಕಾರವು ಕಸ್ಟಮ್ಸ್ ಟ್ಯಾರಿಫ್ ರಚನೆಯನ್ನು ಮರುಸಂಘಟಿಸಿದೆ. ಇದುವರೆಗೆ ಇದ್ದ ಸಂಕೀರ್ಣ ತೆರಿಗೆ ಹಂತಗಳನ್ನು ಕಡಿಮೆ ಮಾಡಿ, ಸುಂಕದ ದರಗಳನ್ನು ಸರಳಗೊಳಿಸಲಾಗಿದೆ. ಇದರಿಂದಾಗಿ ವರ್ಗೀಕರಣ ವಿವಾದಗಳು ಕಡಿಮೆಯಾಗಲಿದ್ದು, ಆಮದುದಾರರಿಗೆ ವ್ಯವಹಾರ ನಡೆಸಲು ಸುಲಭವಾಗಲಿದೆ.ZAVYA 925 Sterling Silver Modest Triple Tone Chain Bracelet (Single) | Gift for Women and Girls | With Certificate of Authenticity and 925 Hallmark
2. ಔಷಧಗಳು ಮತ್ತು ಜೀವರಕ್ಷಕ ಮೆಡಿಸಿನ್ ಆಮದಿಗೆ ರಿಲೀಫ್:
ಆರೋಗ್ಯ ಕ್ಷೇತ್ರದಲ್ಲಿ ಸಾಮಾನ್ಯ ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.
ಕ್ಯಾನ್ಸರ್ ಔಷಧಗಳು: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 13 ಪ್ರಮುಖ ಔಷಧಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ.
ಜೀವರಕ್ಷಕ ಔಷಧಗಳು: ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಗಳ ಆಮದು ಸುಂಕವನ್ನು ಕಡಿಮೆ ಮಾಡಲಾಗಿದ್ದು, ಇದರಿಂದ ವೈದ್ಯಕೀಯ ವೆಚ್ಚ ಗಣನೀಯವಾಗಿ ತಗ್ಗಲಿದೆ.ಇದನ್ನು ಓದಿ: ಕೇಂದ್ರ ಬಜೆಟ್ 2026: ನಾಲ್ಕು ಪ್ರಮುಖ ಇಂಜಿನ್ ತಂತ್ರಗಳ ಹೈಲೈಟ್ಸ್ - ಇಲ್ಲಿದೆ ಮಾಹಿತಿ
3. ಕ್ರಿಟಿಕಲ್ ಮಿನರಲ್ಸ್ :
ಭವಿಷ್ಯದ ತಂತ್ರಜ್ಞಾನಕ್ಕೆ ಅಡಿಪಾಯವಾಗಿರುವ 25 ನಿರ್ಣಾಯಕ ಖನಿಜಗಳ ಮೇಲೆ ಸರ್ಕಾರವು ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.
ಲಿಥಿಯಂ, ಕೋಬಾಲ್ಟ್, ತಾಮ್ರ ಮತ್ತು ರೇರ್ ಅರ್ಥ್ ಎಲಿಮೆಂಟ್ಸ್‌ಗಳಂತಹ ಖನಿಜಗಳು ಈಗ ಅಗ್ಗವಾಗಲಿವೆ.
ಇದು ಪರಮಾಣು ಶಕ್ತಿ, ಬಾಹ್ಯಾಕಾಶ ಸಂಶೋಧನೆ ಮತ್ತು ರಕ್ಷಣಾ ವಲಯದ ಉತ್ಪಾದನೆಗೆ ಭಾರಿ ನೆರವು ನೀಡಲಿದೆ.ಇದನ್ನು ಓದಿ: ಕೇಂದ್ರ ಬಜೆಟ್ 2026 - ಕರ್ನಾಟಕ ಕರಾವಳಿಗೆ ಬಲ - ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒಲವು
4. ಎಲೆಕ್ಟ್ರಾನಿಕ್ ಸರಕುಗಳು ಮತ್ತು ಲಿಥಿಯಂ ಐಯಾನ್ ಬ್ಯಾಟರಿ:
ಭಾರತವನ್ನು ಎಲೆಕ್ಟ್ರಾನಿಕ್ಸ್ ಹಬ್ ಮಾಡಲು ಸರ್ಕಾರವು ಮೊಬೈಲ್ ಫೋನ್ ಮತ್ತು ಅವುಗಳ ಬಿಡಿಭಾಗಗಳ ಮೇಲಿನ ಬಿಡಿಎಲ್ (BCD) ಅನ್ನು ಶೇ 15ಕ್ಕೆ ಇಳಿಸಿದೆ.
ಲಿಥಿಯಂ ಐಯಾನ್ ಬ್ಯಾಟರಿ: ಎಲೆಕ್ಟ್ರಿಕ್ ವಾಹನಗಳ (EV) ಹೃದಯಭಾಗವಾದ ಬ್ಯಾಟರಿ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಎಲೆಕ್ಟ್ರಿಕ್ ಕಾರುಗಳು ಮತ್ತು ಸ್ಕೂಟರ್‌ಗಳ ಬೆಲೆ ಇಳಿಕೆಯಾಗಲಿದ್ದು, ಪರಿಸರ ಸ್ನೇಹಿ ಸಾರಿಗೆಗೆ ಉತ್ತೇಜನ ಸಿಗಲಿದೆ.
5. ಶಿಪ್ಪಿಂಗ್ ಮತ್ತು ಹಡಗು ದುರಸ್ತಿ ವಲಯ:
ಶಿಪ್ಪಿಂಗ್ ವಲಯದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲು ಸಚಿವರು ಹೊಸ ಘೋಷಣೆಗಳನ್ನು ಮಾಡಿದ್ದಾರೆ.
ಹಡಗುಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (MRO) ಕಾರ್ಯಕ್ಕಾಗಿ ದೇಶೀಯವಾಗಿ ಹೂಡಿಕೆ ಮಾಡುವವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ವಾರಣಾಸಿ ಮತ್ತು ಪಟ್ನಾದಲ್ಲಿ ಹೊಸ ಹಡಗು ದುರಸ್ತಿ ಕೇಂದ್ರಗಳ ಸ್ಥಾಪನೆಯಿಂದ ಒಳನಾಡು ಜಲಮಾರ್ಗಗಳ ಮೂಲಕ ಸರಕು ಸಾಗಣೆ ಅಗ್ಗವಾಗಲಿದೆ.ಇದನ್ನು ಓದಿ: ಕೇಂದ್ರ ಬಜೆಟ್ 2026-27 ಅಪ್‌ಡೇಟ್ಸ್ - ಪ್ರಮುಖಾಂಶಗಳಿವು
6. ದೂರಸಂಪರ್ಕ ಕ್ಷೇತ್ರದಲ್ಲಿ ತೆರಿಗೆ ಸಮಾನತೆ:
ದೂರಸಂಪರ್ಕ ವಲಯದಲ್ಲಿನ ವರ್ಗೀಕರಣ ವಿವಾದಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 'ಕ್ಯಾರಿಯರ್ ಗ್ರೇಡ್ ಎತರ್ನೆಟ್ ಸ್ವಿಚ್‌ಗಳ' ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು (BCD) ಶೇ 20 ರಿಂದ ಶೇ 10 ಕ್ಕೆ ಇಳಿಸಲಾಗಿದೆ. ಇದರಿಂದ ಇಂಟರ್ನೆಟ್ ಮತ್ತು ನೆಟ್‌ವರ್ಕಿಂಗ್ ಉಪಕರಣಗಳ ಬೆಲೆ ತಗ್ಗಲಿದೆ.