ದಸರಾ ಹಬ್ಬದ ಹಿನ್ನೆಲೆಯಲ್ಲಿ ಸರಣಿ ರಜೆಗಳು ಬಂದಿದ್ದು, ಜನ ತಮ್ಮ ಊರುಗಳತ್ತ ಪ್ರಯಾಣಿಸುತ್ತಿದ್ದಾರೆ. ವಿಶೇಷವಾಗಿ, ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನಿಂದ ಮೈಸೂರಿಗೆ ಸಾವಿರಾರು ಜನರು ಹೊರಡುತ್ತಿದ್ದಾರೆ. ಆದರೆ, ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಖಾಸಗಿ ಬಸ್ಸುಗಳು ಪ್ರಯಾಣ ದರವನ್ನು ಹೆಚ್ಚಿಸಿ ಪ್ರಯಾಣಿಕರಿಗೆ ಆಘಾತ ನೀಡಿವೆ.ಕೆಎಸ್‌ಆರ್‌ಟಿಸಿ ಬೆಂಗಳೂರು-ಮೈಸೂರು ಬಸ್ ಟಿಕೆಟ್ ದರವನ್ನು 20 ರೂಪಾಯಿ ಹೆಚ್ಚಿಸಿದೆ. ತಡೆರಹಿತ ಬಸ್ ಟಿಕೆಟ್ ದರ 210 ರೂಪಾಯಿಗಳಿಂದ 230 ರೂಪಾಯಿಗಳಿಗೆ ಏರಿಕೆಯಾದರೆ, ಸಾಮಾನ್ಯ ಬಸ್ ಟಿಕೆಟ್ ದರ 161 ರೂಪಾಯಿಗಳಿಂದ 180 ರೂಪಾಯಿಗಳಿಗೆ ಏರಿಕೆಯಾಗಿದೆ