ಶಿವರಾಜ್ಕುಮಾರ್ ತಮ್ಮ 135ನೇ ಚಿತ್ರಕ್ಕೆ ಸಹಿ ಹಾಕಿದ್ದು, ಇದನ್ನು ರಾಜಾ (ರಮೇಶ್ ಕುಮಾರ್) ಅವರ ಅಫ್ರೋಡೈಟ್ ರೆನೈಸಾನ್ಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಜನೆಗೆ 'ಪದವಿಪೂರ್ವ' ಖ್ಯಾತಿಯ ಹರಿ ಜಯಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ. ಅವರ ಅನುಭವ ಮತ್ತು ಹೊಸ ದೃಷ್ಟಿಕೋನ ಚಿತ್ರಕ್ಕೆ ವಿಶೇಷ ಮೆರುಗು ನೀಡಲಿದೆ ಎನ್ನಲಾಗಿದೆ.ಈ ಮೆಗಾ ಫ್ಯಾಮಿಲಿ ಎಂಟರ್ಟೈನರ್ನಲ್ಲಿ ಶಿವರಾಜ್ಕುಮಾರ್ ಅಸಾಂಪ್ರದಾಯಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಆರಂಭಿಸಲು ತಂಡ ಸಜ್ಜಾಗಿದೆ. ಪ್ರಸ್ತುತ ನಾಯಕಿ ಮತ್ತು ಇತರ ಪ್ರಮುಖ ಪಾತ್ರಗಳಿಗೆ ಕಲಾವಿದರನ್ನು ಅಂತಿಮಗೊಳಿಸಲಾಗ