ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರ ಹೆಸರು ವಿನ್ನರ್ ಪಟ್ಟಿಗೆ ಗಟ್ಟಿಯಾಗಿ ಕೇಳಿಬರುತ್ತಿದೆ. ಅವರ ಆಟದ ಶೈಲಿ, ತಂತ್ರ ಮತ್ತು ನಿರಂತರ ಚಟುವಟಿಕೆಗಳು ಅವರಿಗೆ ಉತ್ತಮ ಫಾಲೋಯಿಂಗ್ ತಂದಿವೆ. ಆದರೆ, ಇದೀಗ ಅವರ ವಿರುದ್ಧ ‘ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರೆ’ ಎಂಬ ಆರೋಪಗಳು ಮನೆಯೊಳಗೆ ಚರ್ಚೆಗೆ ಕಾರಣವಾಗಿವೆ. ಗಿಲ್ಲಿ ಯಾವ ಕ್ಯಾಪ್ಟನ್ ಬಂದರೂ ಅವರ ಮುಂದೆ ನಿಂತುಕೊಳ್ಳುವುದು, ಉಪನಾಯಕ ಸ್ಥಾನ ತೆಗೆದುಕೊಳ್ಳುವುದು ಮತ್ತು ಸ್ಟ್ರಾಂಗ್ ಆಟಗಾರರ ಜೊತೆ ಸೇರಿಕೊಳ್ಳುವುದು ಕೆಲವರಿಗೆ ಅನುಮಾನ ಮೂಡಿಸಿದೆ.ರಘು ಕ್ಯಾಪ್ಟನ್ ಆಗಿದ್ದಾಗಲೂ ಗಿಲ್ಲಿ ಅವರ ಹಿಂದೆ ನಿಂತಿದ್ದರು. ಇದೇ ರೀತಿ ಈಗ ಅಭಿಷೇಕ್ ಕ್ಯಾಪ್ಟನ