ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಅವರು ಕೇವಲ ನಟನಲ್ಲ, ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವಿರುವ ಸೂಪರ್‌ಸ್ಟಾರ್. 2023ರಲ್ಲಿ ಬಿಡುಗಡೆಯಾದ ಅವರ ಮೂರು ಚಿತ್ರಗಳು 2800 ಕೋಟಿಗೂ ಹೆಚ್ಚು ಗಳಿಸಿ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ಬರೆದಿವೆ. ಶಾರುಖ್ ಖಾನ್ ಅವರ ಹಳೆಯ ಕಾಲೇಜು ಅಂಕಪಟ್ಟಿಯೂ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.Guess Leather Casual Analog Black Dial Men's Watch-Gw0202G1
ಶಾರುಖ್ ಖಾನ್ 1992ರಲ್ಲಿ ‘ದೀವಾನಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿದರು. ನವದೆಹಲಿಯಲ್ಲಿ ಜನಿಸಿದ ಅವರು ಸೇಂಟ್ ಕೊಲಂಬಾ ಶಾಲೆಯಲ್ಲಿ ಶಿಕ್ಷಣ ಪಡೆದರು. ಹಾಕಿ ಮತ್ತು ಫುಟ್‌ಬಾಲ್‌ನಲ್ಲಿ ಉತ್ತಮ ಆಟಗಾರರಾಗಿದ್ದ ಶಾರುಖ್, ನಂತರ ದೆಹಲಿ ವಿಶ್ವವಿದ್ಯಾಲಯದ ಹನ್ಸ್‌ರಾಜ್ ಕಾಲೇಜಿನಲ್ಲಿ ಬಿಎ ಅರ್ಥಶಾಸ್ತ್ರ ಅಭ್ಯಾಸ ಮಾಡಿದರು. ಕಾಲೇಜು ದಿನಗಳಲ್ಲಿ ನಾಟಕ ಮತ್ತು ಕಲಾಸಂಸ್ಕೃತಿಯಲ್ಲಿ ಕ್ರಿಯಾಶೀಲರಾಗಿದ್ದರು.
ಇತ್ತೀಚೆಗೆ ಅವರ ಹಳೆಯ ಅಂಕಪಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಎಲೆಕ್ಟ್ರಾನಿಕ್ಸ್‌ನಲ್ಲಿ 92, ಅಕೌಂಟ್ಸ್‌ನಲ್ಲಿ 78 ಮತ್ತು ಇಂಗ್ಲಿಷ್‌ನಲ್ಲಿ 51 ಅಂಕಗಳನ್ನು ಪಡೆದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.ಇದನ್ನು ಓದಿ:ಗುಳಿಗ ಹಾಡು ಹೇಗೆ ಸಿದ್ಧವಾಯಿತು? ತಂಡ ಎದುರಿಸಿದ ಕಷ್ಟಗಳು ಏನು..? ಇಲ್ಲಿದೆ ಅಚ್ಚರಿ ಕಥೆ
2018ರ ‘ಜಿರೋ’ ಸಿನಿಮಾ ವಿಫಲವಾದ ನಂತರ, ಶಾರುಖ್ ಐದು ವರ್ಷಗಳ ಕಾಲ ದೊಡ್ಡ ಪರದೆಯಿಂದ ದೂರ ಉಳಿದರು. ನಂತರ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಮೂಲಕ ಭರ್ಜರಿಯಾಗಿ ಹಿಂದಿರುಗಿದರು. ಮುಂದಿನ ವರ್ಷ ಅವರ ಹೊಸ ಸಿನಿಮಾ ‘ಕಿಂಗ್’ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅವರ ಮಗಳು ಸುಹಾನಾ ಖಾನ್ ನಟನೆಯ ಆರಂಭ ಮಾಡುತ್ತಿದ್ದು, ಅವರ ಮಗ ಆರ್ಯನ್ ಖಾನ್ ಇತ್ತೀಚೆಗೆ ವೆಬ್‌ಸಿರೀಸ್ ಮೂಲಕ ನಿರ್ದೇಶನ ಆರಂಭಿಸಿದ್ದಾರೆ.