ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪ್ರಭಾವ ಎಷ್ಟಿದೆ ಎಂದರೆ, ಕಣ್ಣಿಗೆ ಕಂಡಿದ್ದೆಲ್ಲಾ ನಿಜ ಎಂದು ನಂಬಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅದರಲ್ಲೂ ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಆಕರ್ಷಿತರಾದ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಈಗ ಬೀದಿಗೆ ಬಿದ್ದಿದ್ದಾರೆ. ಬೋಟಿಕ್ ಟ್ರೈನಿಂಗ್ ಹೆಸರಿನಲ್ಲಿ ನಡೆದ ಈ ಬೃಹತ್ ವಂಚನೆಯ ಜಾಲ ಈಗ ಬಯಲಾಗಿದೆ. ಏನಿದು ಪ್ರಕರಣ?ಆಂಧ್ರಪ್ರದೇಶ ಮೂಲದ ಬಾಲಬೊಮ್ಮು ಸುನಾದ ಎಂಬಾಕೆ ಬೆಂಗಳೂರಿನ ವಿದ್ಯಾರಣ್ಯಪುರದ ಸಾಯಿ ಟವರ್ ಬಳಿ 'ದೇವಾಂಶ್ ಡಿಸೈನರ್ ಅಂಡ್ ಬೋಟಿಕ್' ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಳು. ತಾನು ಅಂತರಾಷ್ಟ್ರೀ